ಬರ್ತಿದಾನೆ ಹೊಸ ‘ಮಿ.ಚೀಟರ್ ರಾಮಾಚಾರಿ’

Published on

423 Views

ಇತ್ತೀಚೆಗೆ ಹೊಸಬರ ಆಲೋಚನೆಗಳು ಸ್ಯಾಂಡಲ್ ವುಡ್ ನಲ್ಲಿ ಸಖತ್ ವರ್ಕೌಟ್ ಆಗ್ತಿವೆ..ಹೊಸ ಹುಡುಗ ರಾಮಾಚಾರಿ ತಮ್ಮದೇ ಹೆಸರಿನಲ್ಲಿ ‘ಮಿ.ಚೀಟರ್ ರಾಮಾಚಾರಿ’ ಎಂಬ ಸಿನಿಮಾವನ್ನು ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ದಿನನಿತ್ಯ ನಡೆಯುವ ಸಣ್ಣಪುಟ್ಟ ಮೋಸದ ಜತೆಗೆ ವ್ಯಭಿಚಾರ, ಡ್ರಗ್ಸ್ ಮಾಫಿಯಾ ಸಂಗತಿಗಳನ್ನೂ ಇಟ್ಟುಕೊಂಡು,ಹಾಗೂ ಇತ್ತೀಚಿನ ದಿನಗಳಲ್ಲಿ ಉದ್ಭವವಾದ ನೋಟು ಅಮೌಲಿಕರಣ ಹಾಗೂ ವಾಸ್ತವ ಸಮಸ್ಯೆಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆಯಂತೆ.ನೈಜ ಗ್ರಾಮೀಣ ಕಲಾವಿದರ ದಂಡೇ ಈ ಚಿತ್ರದ ನಿಜವಾದ ಶಕ್ತಿಯಾಗಿದ್ದು, ಎಲ್ಲರೂ ಉತ್ತರ ಕರ್ನಾಟಕದ ಮೂಲದವರು. ಈಗ ಈ ಚಿತ್ರಕ್ಕೆ ಬಂಡವಾಳ ಹಾಕಿ ಇಂತಹ ಹಲವಾರು ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ ನಿರ್ಮಾಪಕರುಗಳಾದ ಹೆಸರು ಪ್ರವೀಣಾ ಕುಲಕರ್ಣಿ ದಂಪತಿಗಳು. ಎಲ್ಲಿಯೂ ಸಹ ಹೊಸಬರೆಂಬ ಛಾಯೆ ಕಾಣದ ಹಾಗೆ ಮೇಕಿಂಗ್, ಸಾಂಗ್, ಹಾಗೂ ಕಥೆಯಲ್ಲಿ ತಮ್ಮ ಪ್ರತಿಭೆ ತೋರಿದೆ ಈ ಚಿತ್ರತಂಡ. ಹಾಗೇನೇ ಚಿತ್ರದ ಟ್ರೈಲರ್ ಕೂಡ ಅಷ್ಟೇ ಕ್ಯೂರಿಯಾಸಿಟಿನಾ ಬಿಲ್ಡ್ ಮಾಡುತ್ತೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com