ಸ್ಯಾಂಡಲ್ ವುಡ್ ನಲ್ಲಿ ರೀ-ರಿಲೀಸ್ ಟ್ರೆಂಡ್!!
ಕನ್ನಡ ಚಿತ್ರರಂಗ ಸೇರಿ ಇದೀಗ ಟಾಲಿವುಡ್, ಹಾಲಿವುಡ್, ಬಾಲಿವುಡ್, ಸ್ಯಾಂಡಲ್’ವುಡ್ ಎಲ್ಲೆಲ್ಲೂ ರಿ-ರಿಲೀಸ್ ಹವಾ.
ಏನಿದು ರೀ-ರಿಲೀಸ್ ಟ್ರೆಂಡ್, ಬನ್ನಿ ನೋಡೋಣ.
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹಿಂದಿನ ಹಿಟ್ ಚಿತ್ರಗಳನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಅಭಿಮಾನಿಗಳು ತಮ್ಮ ಹೀರೋಗಳ ಹಿಂದಿನ ಸೂಪರ್ ಹಿಟ್ ಚಲನಚಿತ್ರಗಳನ್ನು ಮತ್ತೆ ಚಿತ್ರಮಂದಿರಗಳಿಗೆ ಹೋಗಿ ನೋಡುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ, ರೀ- ರಿಲೀಸ್ ಆಗುತ್ತಿರುವ ಚಿತ್ರಗಳು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ. ಮರುಬಿಡುಗಡೆಯಾದ ಚಿತ್ರಗಳು ದಾಖಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಪ್ರಸ್ತುತ ಬಿಡುಗಡೆಯಾದ ಚಿತ್ರಗಳಿಗೆ ಹೋಲಿಸಿದರೆ ಕೆಲವು ರೀ-ರಿಲೀಸ್ ಆದ ಚಿತ್ರಗಳು ಉತ್ತಮ ಪ್ರದರ್ಶನ ನೀಡಿವೆ.
ಮರುಬಿಡುಗಡೆಯಾದ ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೋ
ಶಿವರಾಜ್ ಕುಮಾರ್ ಅವರ ಓಂ ಚಿತ್ರ ಬಹಳ ಯಶಸ್ಸು ಕಂಡಿತ್ತು. ಅದೆ ಸಾಲಿನಲ್ಲಿ ಪವರ್ ಸ್ಟಾರ್ ಅಪ್ಪು ಪುನೀತ್ ರಾಜ್ ಕುಮಾರ್ ರವರ ಜಾಕಿ ಸಿನಿಮ ರೀ-ರಿಲೀಸ್ ಆಗಿ ತುಂಬಾ ಯಶಸ್ಸು ಪಡೆದುಕೊಂಡಿತ್ತು.
ಇದೀಗ ರಿಯಲ್ ಸ್ಟಾರ್ ಉಪೇಂದ್ರ ರವರ ‘A’ ಮರುಬಿಡುಗಡೆಗೊಂಡು ಬಹಳಷ್ಟು ಯಶಸ್ಸನ್ನು ಕಾಣುತ್ತಿದೆ. ‘A’ ಸಿನಿಮಾವನ್ನು ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ನೋಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
‘A’ ಚಿತ್ರ ಮೊದಲು ರಿಲೀಸ್ ಆದಾಗ ಕೆಲವು ಅಭಿಮಾನಿಗಳು ಚಿತ್ರಮಂದಿರದಲ್ಲಿ ನೋಡದಿದ್ದವರು, ಇಂದು ನೋಡಿ ಸಂಭ್ರಮಿಸಿದ್ದಾರೆ ಹಾಗೂ A ಚಿತ್ರ ಯಾವ ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗೆ ಕಡಿಮೆ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ, ರೀ-ರಿಲೀಸ್‌ಗಳು ಸಿ ಯಲ್ಲಿ ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ.
ಕೆಲವು ಮರುಬಿಡುಗಡೆಯಾದ ಚಲನಚಿತ್ರಗಳು ಹೆಚ್ಚು ಫುಟ್‌ಫಾಲ್‌ಗಳನ್ನು ಸೃಷ್ಟಿಸಿವೆ ಮತ್ತು ಪ್ರಸ್ತುತ ಬಿಡುಗಡೆಗಳಿಗೆ ಹೋಲಿಸಿದರೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಇದು ಚಲನಚಿತ್ರ ಪ್ರೊಜೆಕ್ಟರ್‌ಗಳು ರಿಪೀಟ್ ಆಗಲು ಕಾರಣವಾಗಿದ್ದು, ಇನ್ನಷ್ಟು ಹೆಚ್ಚಿನ ಚಿತ್ರಗಳನ್ನು ಮರು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಹೆಚ್ಚಿದೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ flixoye.com ನ್ನು ಫಾಲೋ ಮಾಡಿ.