ವಿಭಿನ್ನ ಕಥಾಹಂದರವಿರುವ ಮೌನಂ ಟ್ರೈಲರ್ ಸದ್ಯದಲ್ಲೇ

Published on

397 Views

ಉದಯೋನ್ಮುಖ ನಿರ್ದೇಶಕ ರಾಜ್ ಪಂಡಿತ್ ಅವರು ಕಥೆ ಚಿತ್ರಕಥೆ
ಬರೆದು ನಿರ್ದೇಶನ ಮಾಡಿರುವ ವಿಭಿನ್ನವಾದ ಕಥೆಯಿರುವ ಮೌನಂ
ಚಿತ್ರವು ತೆರೆಗೆ ಸಜ್ಜಾಗುತ್ತಿದೆ. ಹಿರಿಯ ನಟರಾದ ಅವಿನಾಶ್ ನಟಿ ಮಯೂರಿ
ಹಾಗೂ ಬಾಲಾಜಿ ಶರ್ಮಾ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು,
ನಿಹಾರಿಕಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಶ್ರೀಹರಿ ಎಂಬುವವರು ಈ
ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಆರವ್ ರಿಶಿಕ್ ಅವರು ಸಂಗೀತ
ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ಗುಣವಂತ ಮಂಜು, ನಯನ
(ಕಾಮಿಡಿ ಕಿಲಾಡಿಗಳು) ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ
ನಟಿಸಿದ್ದಾರೆ‌.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com