ಉಳಿದವರಾರು” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ.

Published on

371 Views

ಬಹಳಷ್ಟು ಯುವ ಪ್ರತಿಭೆಗಳು ಹೊಸ ಆಲೋಚನೆಯೊಂದಿಗೆ ಸಿನಿ ರಂಗದಲ್ಲಿ ಭದ್ರ ನೆಲೆಯನ್ನು ಕಾಣಲು ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ನೇಸರ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿರುವ “ಉಳಿದವರಾರು” ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರೇಣುಕಾಂಬ ಪ್ರಿವ್ಯೂ ಥೇಟರ್ ನಲ್ಲಿ ಮುಖ್ಯ ಅತಿಥಿಗಳಾಗಿ ಬಂದ ನಿರ್ದೇಶಕರಾದ ವಿಕ್ಟರಿ ವಾಸು, ನಾಗೇಂದ್ರ ಅರಸ್, ನಾಗಚಂದ್ರ, ನಟ ಕೆಂಪೇಗೌಡ ಸೇರಿದಂತೆ ಹಲವಾರು ಗಣ್ಯರು ಪೋಸ್ಟರ್ ಲಾಂಚ್ ಮಾಡಿ ತಂಡಕ್ಕೆ ಶುಭವನ್ನು ಹಾರೈಸಿದರು. ಚಿತ್ರದ ಕುರಿತು ನಿರ್ದೇಶಕ ಸತೀಶ್ ಪಾಟೀಲ್ ಮಾತನಾಡುತ್ತಾ ಈಗಾಗಲೇ ನಾನು ಬಿಸಿನೆಸ್ ಅನ್ನುವ ಚಿತ್ರವನ್ನು ಸಿದ್ಧಪಡಿಸಿ ತೆರೆಗೆ ತರಲು ರೆಡಿ ಇದ್ದೇನೆ. ಇದು ನಾನೇ ನಿರ್ಮಿಸಿ ನಿರ್ದೇಶನ ಮಾಡುತ್ತಿರುವ 2ನೇ ಚಿತ್ರ. ಈ ಚಿತ್ರಕ್ಕೆ ಹಲವಾರು ಗೆಳೆಯರು ಸಾತ್ ನೀಡಿದ್ದಾರೆ. ವಿಶೇಷವಾಗಿ ನಮಗೆ ಪಾಂಡು , ರಘು ಅಣ್ಣನ ಸಹಕಾರವಿದೆ. ಇದೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಸಂಪೂರ್ಣ ಕಮರ್ಷಿಯಲ್ ಆಗಿ ನಿರ್ಮಾಣವಾಗಲಿದೆ. ಇವತ್ತಿನ ಜನರೇಶನ್ ನಲ್ಲಿ ನಾನು ನಾನು ಅಂತ ಹೊಡೆದಾಡೋರು ಜನರ ನಡುವೆ, ಜೀವನ ಅಂದ್ರೆ ಏನು, ಒಂದು ಪ್ರಾಣಕ್ಕೆ ಬೆಲೆ ಏನು ಎಂದು ಹೇಳುತ್ತೇವೆ. ಇದೊಂದು ರಿವೆಂಜ್ ಸ್ಟೋರಿ. ಹೀರೋಯಿನ್ ಓರಿಯೆಂಟೆಡ್ ಕಥೆಯಾಗಿದ್ದು, ನಾಯಕಿಯ ಕುಟುಂಬವನ್ನು ಹೊಡೆದು ಹಾಕಿ ದುಡ್ಡಿನಿಂದ ದರ್ಪ ತೋರುತ್ತಾ, ನಾನೇ ನಂಬರ್ ಒನ್ ಆಗ್ಬೇಕು ಅನ್ನೋ ವ್ಯಕ್ತಿಗೆ ಸರಿಯಾದ ಪಾಠವನ್ನು ಕಲಿಸಿ ಕಥೆ. ಶ್ರೀಮಂತಿಕೆಯ ಮದದಲ್ಲಿರುವ ನರರಾಕ್ಷಸರ ಕೋಟೆಯನ್ನು ಭೇದಿಸುವ ನಾಯಕಿ ಏನೆಲ್ಲಾ ಕಷ್ಟ ಪಡುತ್ತಾಳೆ ಹಾಗೂ ದುಷ್ಟರಿಗೆ ಜೀವದ ಬೆಲೆ ಏನು ಎಂಬುದನ್ನು ಹೇಗೆ ತಿಳಿಸುತ್ತಾಳೆ ಅಂಶ ಒಳಗೊಂಡಿದೆ. ಒಂದೇ ಹಂತದಲ್ಲಿ ಇದೇ ತಿಂಗಳು 25 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬಾಲರಾಜ್ ವಾಡಿ ಮುಖ್ಯ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದು, ತ್ರಿವೇಣಿ ನಾಯಕಿಯಾಗಿದ್ದು, ವಿಕ್ಟರಿ ವಾಸು, ನಾಗೇಂದ್ರ ಅರಸು, ಕಾಮಿಡಿ ಪತ್ರ ಪಾತ್ರದಲ್ಲಿ ಕೆಂಪೇಗೌಡ, ಕಾಮಿಡಿ ಕಿಲಾಡಿ ಸಂತು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ಹಾಗೆಯೇ ಚಿಕ್ಕಮಗಳೂರು, ಹಾಸನ್, ಸಕಲೇಶಪುರದಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುತ್ತೇವೆ. ಈ ಚಿತ್ರಕ್ಕೆ ಛಾಯಾಗ್ರಹಣ ಮಸ್ತಾನ್ ಶರೀಫ್, ಸಂಗೀತ ಗಂಧರ್ವ, ಸಾಹಸ ಕೌರವ ವೆಂಕಟೇಶ ಮಾಡುತ್ತಿದ್ದಾರೆ.

ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್- ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿ ಸಿನಿಮಾ.

ಪ್ರಮುಖ ಪಾತ್ರಧಾರಿ ಬಾಲರಾಜ್ ವಾಡಿ ಮಾತನಾಡಿ ಈ ಚಿತ್ರದ ಪೋಸ್ಟರ್ ಜೇಮ್ಸ್ ಬಾಂಡ್ ರೀತಿ ಇದೆ. ಫೋಟೋ ಶೂಟ್ ಬಹಳ ಚೆನ್ನಾಗಿ ಮಾಡಿದ್ದಾರೆ. ನಿರ್ದೇಶಕ ತುಂಬಾ ಕನಸುಗಳನ್ನು ಹೊತ್ತು ಕೊಂಡಿದ್ದು , ಸಿನಿಮಾವನೇ ಜೀವಿಸಿದ್ದಾರೆ. ನನ್ನದು ಒಬ್ಬ ದೊಡ್ಡ ಬ್ಯುಸಿನೆಸ್ ಮ್ಯಾನ್ ಪಾತ್ರ , ಅವನ ಸುತ್ತ ಅಣ್ಣ ತಮ್ಮಂದಿರು, ಅವ್ನು ನಂಬರ್ ಒನ್ ಸ್ಥಾನವನ್ನು ಉಳಿಸಿಕೊಳ್ಳಲು ಏನೆಲ್ಲ ಹೊರಟ ಮಾಡುತ್ತಾನೆ ಎಂಬುದನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದರೆ. ಇದೊಂದು ಹೀರೋಯಿನ್ ಕಥೆಯಾಗಿದೆ. ನಿಮ್ಮೆಲ್ಲರ ಪ್ರೀತಿ ಸಹಕಾರ ನಮ್ಮ ತಂಡದ ಮೇಲೆ ಇರಲಿ ಎಂದರು. ಇನ್ನು ಮತ್ತೊಬ್ಬ ಕಲಾವಿದ ನಾಗೇಂದ್ರ ಅರಸ್ ಮಾತನಾಡುತ್ತಾ ಈ ಚಿತ್ರದ ಟೈಟಲ್ ಚೆನ್ನಾಗಿದೆ. ಈ ಚಿತ್ರದಲ್ಲಿ ಬಾಲರಾಜ್ ವಾಡಿ ರವರ ಸಹೋದರನ ಪಾತ್ರ ಮಾಡುತ್ತಿದ್ದೇನೆ. ಒಂದು ರೀತಿ ಮಿನಿ ಜೇಮ್ಸ್ ಬಾಂಡ್ ಹಾಗೆ. ಬ್ಯಾಗ್ರೌಂಡ್ ಮ್ಯೂಸಿಕ್, ಪೋಸ್ಟರ್ ಚೆನ್ನಾಗಿದೆ ನಿಮ್ಮೆಲ್ಲರ ಪ್ರೋತ್ಸಾಹ ಈ ತಂಡದ ಮೇಲೆ ಇರಲಿ ಎಂದರು. ಇನ್ನು ಮತ್ತೊಬ್ಬ ಕಲಾವಿದ ವಿಕ್ಟರಿ ವಾಸು ಮಾತನಾಡುತ್ತಾ ಈ ಚಿತ್ರದ ಪೋಸ್ಟರ್ ಎಷ್ಟು ಚೆನ್ನಾಗಿದೆಯೋ ಹಾಗೆಯೇ ಸಿನಿಮಾ ಉತ್ತಮವಾಗಿ ಬರಲಿ ಇನ್ನು ಹೆಚ್ಚು ಹೆಚ್ಚು ಸಿನಿಮಾ ಈ ಸಂಸ್ಥೆಯಿಂದ ಮಾಡುವಂತಾಗಲಿ ಎಂದು ಶುಭಕೋರಿದರು.

ಟೀಸರ್ ಮೂಲಕ ಕುತೂಹಲ ಹುಟ್ಟಿಸಿರುವ ‘ರಾಕ್ಷಸರು’

ಯುವ ನಟಿ ತ್ರಿವೇಣಿ ಮಾತನಾಡುತ್ತಾ ಇದು ನನಗೆ ಬಹಳ ಚಾಲೆಂಜಿಂಗ್ ಪಾತ್ರ. ನಾನು ಈಗಾಗಲೇ ದೂರವಾಣಿ ಎಂಬ ಚಿತ್ರದಲ್ಲಿ ಟ್ರೇಡಿಶನ್ ಪಾತ್ರವನ್ನು ನಿರ್ವಹಿಸಿದ್ದೆ. ಈ ಚಿತ್ರದಲ್ಲಿ ನನ್ನ ಪಾತ್ರ ಡೆಡ್ ಅಪೋಸಿಟ್ ಪಾತ್ರವಾಗಿದೆ. ನನ್ನ ಪತ್ರಕ್ಕೆ ನಾನು ನ್ಯಾಯ ಒದಗಿಸುತ್ತೇನೆ ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದರು.
ಮತ್ತೊಬ್ಬ ನಟ ಕೆಂಪೇಗೌಡ ಮಾತನಾಡುತ್ತಾ ಈ ಕಥೆ ಬಗ್ಗೆ ಬಹಳಷ್ಟು ಸಲ್ಲ ನಿರ್ದೇಶಕರೊಂದಿಗೆ ಮಾತನಾಡಿದ್ದೇನೆ. ಬಹಳ ವಿಭಿನ್ನವಾದ ಕಂಟೆಂಟ್ ಒಳಗೊಂಡಿದೆ. ನರರಾಕ್ಷಸರೊಂದಿಗೆ ಹಾಸ್ಯ ಮಾಡಿಕೊಂಡು ಯಾರಿಗೆ ಸಹಕಾರಿಯಾಗಿರುತ್ತೇನೆ ಎಂಬ ಪಾತ್ರ ನನ್ನದು. ಒಂದು ಒಳ್ಳೆಯ ಸಂದೇಶ ಇರುವ ಚಿತ್ರವಾಗಿ ಬರಲಿದೆ. ಇನ್ನು ಅತಿಥಿಯಾಗಿ ಬಂದ ನಿರ್ದೇಶಕ ನಾಗಚಂದ್ರ ಮಾತನಾಡುತ್ತಾ ಚಿತ್ರದ ಶೀರ್ಷಿಕೆಯಂತೆ ಉಳಿದುಕೊಳ್ಳುವವರು ಯಾರು ಎಂಬುದನ್ನು ಚಿತ್ರ ಬಂದ ಮೇಲೆ ತಿಳಿಯುತ್ತದೆ. ಒಟ್ಟಾರೆ ಬಹಳ ಉತ್ಸಾಹದಿಂದ ತಂಡ ಮುನ್ನುಗಿದೆ. ಚಿತ್ರ ಉತ್ತವಾಗಿ ಮೂಡಿ ಬರಲಿ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು. ಹಾಗೆಯೇ ಕಾಮಿಡಿ ಕಿಲಾಡಿ ನಟ ಸಂತು , ಸಾಹಸ ನಿರ್ದೇಶಕ ಕೌರವ ವೆಂಕಟೇಶ್, ಸಂಗೀತ ನಿರ್ದೇಶಕ ಗಂಧರ್ವ ಚಿತ್ರದ ಕುರಿತು ಮಾತನಾಡಿದರು. ಈ ಒಂದು ಮೋಶನ್ ಪೋಸ್ಟರ್ ಬಿಡುಗಡೆ ಸಮಾರಂಭಕ್ಕೆ ಹಲವರು ಸ್ನೇಹಿತರು ಹಾಜರಿದ್ದು, ತಂಡಕ್ಕೆ ಶುಭವನ್ನು ಕೋರಿದರು.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com