ಶೆಟ್ಟರ ಒಗ್ಗಟ್ಟು ಊರಿಗೆ ಗೊತ್ತು

Published on

681 Views

ಕನ್ನಡದ ಟ್ರಿಪಲ್ ಆರ್ – ರಕ್ಷಿತ್  ,ರಿಷಬ್,ರಾಜ್  ಒಬ್ಬರನೊಬ್ಬರು ಮೀರಿಸುವಷ್ಟು ಪ್ರತಿಭಾವಂತರು ,ಆದರೆ ಎಂದಿಗೂ ಸ್ಪರ್ಧೆಗೆ ಇಳಿಯಲಿಲ್ಲ. ದ್ವೀಪದಂತಾಗಿ ಮುಳುಗಲಿಲ್ಲ . ಬದಲಿಗೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಕ್ತಿಗಳಾಗಿ  ನಿಂತರು .

ರಕ್ಷಿತ್  ತನಗೆ ಸಿಕ್ಕ ಸಣ್ಣ ಗೆಲುವನ್ನು ರಿಷಬ್ ಅವರೊಂದಿಗೆ ಹಂಚಿಕೊಂಡಿರಲಿಲ್ಲವೆಂದರೆ,ರಿಷಬ್ ನಡೆಯುತಿದ್ದ ದಾರಿಯೆ ಬೇರೆಯಾಗಿರುತ್ತಿತೇನೋ. ಅವೆರೇ ಹೇಳುವಂತೆ ಅವರ ಸಿನೆಮಾ ದೃಷ್ಟಿಕೊನವನ್ನು ತಿದ್ದಿ ತೀಡಿದ್ದು ತನ್ನದೇ ಸ್ನೇಹಿತ ರಕ್ಷಿತ್ ,ನಂತರ ರಿಕ್ಕಿ ಮೂಲಕವೂ ರಿಷಬ್ ಗೆ ಸಾಥ್ ಕೊಟ್ಟಿರು.ಕಾಂತಾರ ಪ್ರೀಮಿಯರ್ ನಲ್ಲಿ  ಗೆಳೆಯನ ಗೆಲವು ಕಂಡು ಓದಿ ಬಂದು ತಬ್ಬಿದು ಅವರ ಗಳೆತನಕ್ಕೆ  ಹಿಡಿದಿದ್ದ ಕನ್ನಡಿ. ಒಂದಮ್ಮೆ ಎಲ್ಲರಿಗೂ ಅಂತಹ ಒಂದು ಗೆಳಯ ಇರಬೇಕೆಂದು ಅನಿಸಿದ್ದು ಸುಳ್ಳಲ್ಲ . ನಂತರ ಕಂಡ ಪ್ರತಿಭೆಗಳಿಗೆಲ್ಲಾ ನೀರೆರೆದತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ .

ರಾಜ್ ಬಿ ಶೆಟ್ಟಿ’- ಸಣ್ಣ ಬಜೆಟ್ ಚಿತ್ರಗಳಿಗೆ ಕಾಶೀನಾಥ್’ ನಂತರ ಮೆರಗು ತಂದಿದ್ದೇ ನಮ್ಮ ರಾಜ್. ಸರಳ ,ಸವ್ಯಸಾಚಿ ರಾಜ್ ಒಂದು ಮೊಟ್ಟೆಯ  ಕಥೆ ಮೂಲಕ ಬೆರಗು ಗೊಳಿಸಿದರು.ನಾಯಕ,ನಿರ್ದೇಶಕನಾಗಿ  ಗೆದ್ದಿದರೂ ಸರ್ಕಾರಿ ಚಿತ್ರದ ಬರಹಗಾರರ ಬಳಗದಲ್ಲಿ ಕಾಣಿಸಿಕೊಳ್ಳಲು ಹಿಂಜರಿಯಲಿಲ್ಲ . ಅಲ್ಲಿಯೇ ಈ ಮೂರು ಆರ್ ಗಳ ಸಂಗಮವಾಗಿದ್ದು. ರಾಜ್ ನ ಒಳ್ಳೆ ಯೋಚನೆಗಳಿಗೂ ಇಬ್ಬರು ಬುಜಕೊಡುತ್ತಾ ನಡೆದು  ಬಂದಿದ್ದಾರೆ .

ಗೆಳೆತನದಲ್ಲೇ ಗೆಲವು

ಈ ಎಲ್ಲರೂ ಎಂದಿಗೂ ಒಬ್ಬರು ಇನ್ನೊಬರನ್ನು ಹೋಗಳಲು ಹಿಂಜರಿಯುವುದಿಲ್ಲ . ಇತ್ತೀಚೆಗೆ ವೇದಿಕೆ ಮೇಲೆ ನುಡಿದ ರಾಜ್ “ ರಕ್ಷಿತ್ ನ ದೊಡ್ಡ ಅಭಿಮಾನಿಗಳ ಬಳಗ ದಲ್ಲಿ ನಾನು ಒಬ್ಬ ಅವರು  ಉಳಿದವರು ಕಂಡಂತೆ ಮಾಡದಿದ್ದರೆ ನನಗೆ  ಎಂದೂ  ಮಂಗಳೂರಿನ ಸೊಗಡಿನ ಚಿತ್ರಗಳನ್ನು ಮಾಡುವ ಸ್ಪೂರ್ತಿಯೇ ಬರುತತ್ತಿರಲಿಲ್ಲ ಎಂದರು “.ರಿಷಬ್ ಕೂಡ ತನ್ನ ದೊಡ್ಡ ಕ್ರಿಟಿಕ್ ರಕ್ಷಿತ್ ಯೆಂದೆ ಹೇಳಿಕೊಳ್ಳುತ್ತಾರೆ.ಇವರೆಲ್ಲರೂ ಕಲಿತ ವಿದ್ಯೆಯ ಅಡಗಿಸಿದಡೆ ಹಂಚುತ್ತಾ ತಮ್ಮ ಸುತ್ತಲೇ ಒಂದು ಮಣಿಸಲಾಗದ ಸಾಮ್ರಾಜ್ಯವ ಕಟ್ಟಿಕೊಂಡಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಇಂತಡದೆ ಮನೋಭಾವ ಮೂಡಿದರೆ ಎಲ್ಲರ ಸ್ವ ಹಾಗೂ ಸ್ವಾತಂತ್ರ್ಯ ಬೆಳವಣಿಗೆ  ಸಾಧ್ಯ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com