ನಾಯಕ ಆರ್ಯನ್ ಸೂರ್ಯ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್..
ಈಗಾಗ್ಲೇ ಕೊನೆಯ ಹಂತದ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿರೋ ಚಿತ್ರ ಟೆಂಪರ್. ಸದ್ಯ ಚಿತ್ರದ ನಾಯಕನ ಹುಟ್ಟು ಹಬ್ಬದ ಪ್ರಯುಕ್ತ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಈ ಮೂಲಕ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಕಥೆ, ಚಿತ್ರಕಥೆ, ನಿರ್ದೇಶನ ಮಾಡಿ, ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿರುವ ಮಂಜು ಕವಿ, ಐದು ಹಾಡುಗಳಿಗೆ ಇವರೇ ಸಾಹಿತ್ಯ ರಚಿಸಿದ್ದಾರೆ. ಖ್ಯಾತ ನಟ ಶರಣ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹಾಡಿರುವ ಗಾಯಕ ಆಂತೋನಿ ದಾಸ್ ಹಾಗೂ ಶ್ವೇತಾ ಪ್ರಭು, ಆರ್.ಮಹೇಂದರ್, ಸುಪ್ರಿಯಾ, ಸಂತೋಷ್ ವೆಂಕಿ, ಅನುರಾಧ ಭಟ್ ಹಾಡುಗಳಿಗೆ ದನಿಯಾಗಿದ್ದಾರೆ. ಇನ್ನು ಈ ಹಾಡುಗಳಿಗೆ ಅದ್ಭುತವಾದ ಸಂಗೀತ ನೀಡಿದ್ದಾರೆ ಆರ್.ಹರಿಬಾಬು ಅಂದಹಾಗೆ ಚಿತ್ರಕ್ಕೆ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ವಿ.ವಿನೋದ್ ಕುಮಾರ್, ಬಿ.ಮೋಹನ್ ಬಾಬು ಈ ಚಿತ್ರದಲ್ಲಿ ಬಾಲನಟನಾಗಿ ಮಾಸ್ಟರ್ ಪವನ್ ಮೊರೆ ಅದ್ಭುತವಾಗಿ ನಟಿಸಿದ್ದು, ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಬೆಳ್ಳಿ ತೆರೆಗೆ ಎಂಟ್ರಿ ಕೊಡಲು ತಯಾರಾಗಿರುವ ಆರ್ಯನ್ ಸೂರ್ಯ ತಮ್ಮ ಮೊದಲ ಚಿತ್ರದಲ್ಲಿ ಖಡಕ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು, ಚಿತ್ರದಲ್ಲಿ ನಾಯಕಿಯಾಗಿ ಕಾಶಿಮ ಅಭಿನಯಿಸಿದ್ದಾರೆ. ನಿನ್ನೆ ನಾಯಕ ನಟ ಆರ್ಯನ್ ಸೂರ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಕೊರೊನಾ ಇರೋದ್ರಿಂದ ಕೇಕ್ ಕತ್ತರಿಸಿ, ಸಿಂಪಲ್ಲಾಗಿ ಹುಟ್ಟು ಹಬ್ಬವನ್ನು ನಾಯಕ ಆರ್ಯನ್ ಹುಟ್ಟುಹಬ್ಬ ಆಚರಣೆ ಮಾಡಿದೆ ಚಿತ್ರತಂಡ. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಹಾಜರಿತ್ತು.
ಇನ್ನು ಖ್ಯಾತ ನಟರಾದ ತಬಲಾನಾಣಿ, ಟೆನ್ನಿಸ್ ಕೃಷ್ಣ, ಯತಿರಾಜ್, ಸುಧಾ ಬೆಳವಾಡಿ, ಬಲರಾಜ್ ವಾಡಿ, ಮಿತ್ರ ಹಾಗೂ ಮಜಾ ಟಾಕೀಸ್ ಖ್ಯಾತಿಯ ಪವನ್, ಧನು, ಪ್ರಿಯಾ ತರುಣ್ ಮುಂತಾದವ್ರು ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಇನ್ನು ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆರ್.ಕೆ.ಶಿವಕುಮಾರ್ ಕಾರ್ಯನಿರ್ವಹಿಸಿದ್ದಾರೆ. ಟೆಂಪರ್ ಚಿತ್ರಕ್ಕೆ ಸ್ಯಾಂಡಲ್‌ವುಡ್ ಖ್ಯಾತಿಯ ಸಂಕಲನಕಾರ ಬಿ.ಎಸ್.ಕೆಂಪರಾಜ್ ಕಾರ್ಯನಿರ್ವಹಿಸಿದ್ದಾರೆ. ಇನ್ನು ನೃತ್ಯ ಸಂಯೋಜಕರಾಗಿ ಇಮ್ರಾನ್ ಸರ್ದಾರಿಯ, ಜಗ್ಗು ಮೈಸೂರು, ರಾಜು ಮೈಸೂರು ಪ್ರೇಮ್ ವಹಿಸಿಕೊಂಡಿದ್ದಾರೆ.. ಇನ್ನು ಡೈರೆಕ್ಷನ್ ಟೀಂನಲ್ಲಿ ಸಹಾಯಕ ನಿರ್ದೇಶಕರಾಗಿ ಜೀವನ್ ಪ್ರವಿ ಸಂಜಯ್ ಕಿರಣ್.ಎಸ್.ಜೆ ಸಂಜಯ್. ಪ್ರಶಾಂತ್ ಕಾರ್ಯನಿರ್ವಹಿಸಿದ್ದಾರೆ.