ಕಾಮಿಡಿ ಚಿತ್ರಗಳಿಗೆ ಹೊಸ ಟಚ್ ಕೊಟ್ಟ ಮೂರನೇ ಕೃಷ್ಣಪ್ಪ – ಚಿತ್ರ ವಿಮರ್ಶೆ ಹೀಗಿದೆ.
ಇತ್ತೀಚಿಗೆ ಕನ್ನಡ ಚಿತ್ರರಂಗ ಸೇರಿ ಎಲ್ಲಾ ಚಿತ್ರರಂಗಗಳಲ್ಲಿ ಕಮರ್ಷಿಯಲ್ ಚಿತ್ರಗಳ ಭರಾಟೆಯ ನಡುವೆ ಅಲ್ಲಲ್ಲಿ ಕಾಮಿಡಿ ಚಿತ್ರಗಳು ಬಂದರೂ ಕೂಡ, ಕೇವಲ ಡಬಲ್ ಮೀನಿಂಗ್ ಮೂಲಕ ಬೋರ್ ಹೊಡೆಸುತ್ತವೆ ಎನ್ನುವ ಕೂಗು ಕೇಳಿಬರುತ್ತಿತ್ತು. ಈ ನಡುವೆ ಕನ್ನಡ ಚಿತ್ರರಂಗದ ಕಾಮಿಡಿ ಹೈಟ್ಸ್ ಗೆ ಹೊಸ ಟಚ್ ಕೊಡುವಲ್ಲಿ ರಂಗಾಯಣ ರಘು ಮುಖ್ಯಭೂಮಿಕೆಯ ‘ಮೂರನೇ ಕೃಷ್ಣಪ್ಪ’ ಬಹುತೇಕ ಯಶಸ್ವಿಯಾಗುತ್ತಿದೆ.
ಕಥೆಯ ಎಳೆಯಂತೆ, ಆನೇಕಲ್ ತಾಲ್ಲೂಕಿನ ಪಂಚಾಯತ್ ಅಧ್ಯಕ್ಷನೊಬ್ಬ ತನ್ನೂರಿನ ದೇವಾಲಯಕ್ಕೆ ಅತಿಗಣ್ಯ ವ್ಯಕ್ತಿಯನ್ನು ಆಹ್ವಾನಿಸಬೇಕು ಎಂದುಕೊಳ್ಳುತ್ತಾನೆ. ಆ ಕಾರ್ಯಕ್ರಮಕ್ಕೆ ಸ್ವತಃ ಸಿಎಂ ಖುದ್ದಾಗಿ ನಾನೇ ಬರುತ್ತೇನೆ ಎನ್ನುವುದರಿಂದ ಆರಂಭವಾಗುವ ಕಥೆ, ಥ್ರಿಲ್ಲಿಂಗ್ ಹಾಗೂ ಭರಪೂರ ಕಾಮಿಡಿಯೊಂದಿಗೆ ಹೇಗೆ ಮುಂದಕ್ಕೆ ಸಾಗುತ್ತದೆ ಎನ್ನುವುದೇ ಚಿತ್ರದ ಸಂಪೂರ್ಣ ಟ್ವಿಸ್ಟ್.
ರಂಗಾಯಣ ರಘು ಅವರೊಂದಿಗೆ ಸಂಪತ್ ಮೈತ್ರೇಯ, ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತು, ಶ್ರೀಪ್ರಿಯಾ ಮುಂತಾದವರು ಅಭಿನಯಿಸಿರುವ ಈ ಚಿತ್ರ, ಕಾಮಿಡಿ ಎಂಟರ್ಟೈನ್ಮೆಂಟ್ ನಲ್ಲಂತೂ ಪಕ್ಕಾ ಬ್ಲಾಕ್ ಬಸ್ಟರ್.
ರಂಗಾಯಣ ರಘು ಅವರ ಅತ್ಯದ್ಭುತ ಡೈಲಾಗ್ ಡೆಲಿವರಿ, ಕಾಮಿಡಿ ಪಂಚ್ ಗಳು, ಸಂಪತ್ ಆತ್ರೇಯ ಅವರ ಸ್ಕೂಲ್ ಟೀಚರ್ ಪಾತ್ರದ ಹೊಸತನ, ಚಿತ್ರದುದ್ದಕ್ಕೂ ಕಾಣುವ ಮೈಂಡ್ ವಾಯ್ಸ್, ಕನ್ನಡ ಮಾತನಾಡಲು ಬಾರದೆ ಹೆಣಗಾಡುವ ಕೆಲವರ ಆಕ್ಟಿಂಗ್ ಅಂತೂ ಸೂಪರ್ಬ್.
ಅದಲ್ಲದೇ, ಬ್ಯಾಕ್ ಗ್ರೌಂಡ್ ಸ್ಕೋರ್ ಹಾಗೂ ಮ್ಯೂಸಿಕ್ ಕೂಡ ಒಪ್ಪುವಂತಿದ್ದು, ಒಟ್ಟಾರೆ ಕಾಮಿಡಿ ಎಂಟರ್ಟೈನ್ಮೆಂಟ್ ಚಿತ್ರವನ್ನಾಗಿ ಮೂರನೇ ಕೃಷ್ಣಪ್ಪನನ್ನ ಸ್ವಾಗತಿಸಬಹುದಾಗಿದೆ.
ಆನಂದ್ ರಾಜವಿಕ್ರಮ ಮತ್ತು ಸುಪ್ರೀತ್ ಶರ್ಮಾ ಮ್ಯೂಸಿಕ್ ಇದ್ದರೆ, ಯೋಗಿ ಛಾಯಾಗ್ರಹಣವಿದೆ. ನವೀನ್ ನಾರಾಯಣಘಟ್ಟ ನಿರ್ದೇಶನದ ಈ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ನೂರು ದಿನಗಳ ಸಂಭ್ರಮ ಆಚರಿಸಲಿ ಎನ್ನುವುದೇ ಹಾರೈಕೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.