ಈ ವಾರ ತೆರೆಯ ಮೇಲೆ ಮೂಕ ವಿಸ್ಮಿತ ಬರುತ್ತಿದೆ

Published on

525 Views

ಜೈಗುರು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಗುರುದತ್ ಶ್ರೀಕಾಂತ್
ಅವರು ಚಿತ್ರಕಥೆ ಸಂಭಾಷಣೆ ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ
ಮೂಕ ವಿಸ್ಮಿತ ಚಿತ್ರವು ಈ ವಾರ ತೆರೆಗೆ ಬರುತ್ತಿದೆ. ಖ್ಯಾತ ನಾಟಕಕಾರ
ಟಿ.ಪಿ‌.ಕೈಲಾಸಂ ಅವರ ಟೊಳ್ಳು-ಗಟ್ಟಿ ಕಥೆಯನ್ನು ಆಧಾರವಾಗಿಟ್ಟುಕೊಂಡು ತಯಾರು ಮಾಡಿರುವ ಈ ಚಿತ್ರದಲ್ಲಿ ಸಂದೀಪ್ ಮಲಾನಿ, ವಾಣಿಶ್ರೀ ಭಟ್, ಚಂದ್ರಕೀರ್ತಿ, ಮಾವಳ್ಳಿ ಕಾರ್ತಿಕ್, ಶುಭರಕ್ಷಾ, ಕೃಪಾ, ಪುಷ್ಪ ರಾಘವೇಂದ್ರ, ಪ್ರಹ್ಲಾದ್ ಹಾಗೂ ರಾಜೇಶ್ ರಾವ್ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ. ಸಿದ್ದು ಜಿ.ಎಸ್ ಅವರ ಛಾಯಗ್ರಹಣ, ಚಿನ್ಮಯ್ ಎಂ.ರಾವ್ ಅವರ ಸಂಗೀತ,ಸಂತೋಷ್ ಆರ್. ಚಾವ್ಲ ಅವರ ಸಂಕಲನ ಈ ಚಿತ್ರಕ್ಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com