‘ಅಸಾವರಿ’ ಚಿತ್ರದ ಮೂಲಕ ನಿರ್ದೇಶಕಿಯಾದ ರೂಪದರ್ಶಿ ರೋಶಿನಿ

Published on

482 Views

‘ಅಸಾವರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಹಿಳಾ ನಿರ್ದೇಶಕಿಯ ಆಗಮನವಾಗುತ್ತಿದೆ. ಕವಿತಾ ಲಂಕೇಶ್, ಸುಮನ್ ಕಿತ್ತೂರ್ ಹೀಗೆ ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ರೂಪದರ್ಶಿ ರೋಶಿನಿಯವರು ಸೇರ್ಪಡೆಯಾಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಪಳಗಿರುವ ರೋಶಿನಿಯವರು ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಮಹಿಳಾ ಪ್ರಾಧ್ಯಾನ್ಯತೆಯ ಕಥೆಯೊಂದನ್ನು ಪ್ರಯೋಗಾತ್ಮವಾಗಿ ಹೇಳಲು ಮುಂದಾಗಿದ್ದಾರೆ.

‘ಅಸಾವರಿ’ ಎಂಬುದು ಹಿಂದೂಸ್ಥಾನಿ ಸಂಗೀತದ ಪ್ರಕಾರದ ಒಂದು ರಾಗದ ಹೆಸರು. ಈ ರಾಗಕ್ಕೂ ಸಿನಿಮಾ ಕಥೆಗೂ ಸಂಬಂಧವಿರುವುದರಿಂದ ಚಿತ್ರಕ್ಕೆ ‘ಅಸಾವರಿ’ ಎಂದು ಹೆಸರನ್ನಿಟ್ಟಿದ್ದಾರೆ. ‘ಅಸಾವರಿ’ ಚಿತ್ರದ ಕಥೆಯೂ ಒಬ್ಬ ಹುಡುಗಿ ತನಗೆ ಅಸಾಧ್ಯವೆನಿಸಿದ ಕ್ಷೇತ್ರವನ್ನು ಪ್ರವೇಶ ಮಾಡುವ ಮತ್ತು ಅಲ್ಲಿ ಪಡುವ ಕಷ್ಟವನ್ನು ಇಲ್ಲಿ‌ ತೋರಿಸ ಹೊರಟ್ಟಿದ್ದಾರೆ ರೋಶಿನಿಯವರು. ಅಪ್ಪ ಮಗಳ ಪ್ರೀತಿ, ಕಾನೂನು, ಹೆಣ್ಣು ಮಕ್ಕಳಿಗೆ ಸ್ಪೂರ್ತಿ ತುಂಬುವ ಅಂಶಗಳು ಈ‌‌ ಸಿನಿಮಾದಲ್ಲಿವೆ. ಅಪರೂಪದ ಕಥೆಯೊಂದಿಗೆ ಶುರುವಾಗಲಿದೆ ‘ಅಸಾವರಿ’. ‘ಅಸಾವರಿ’ ಚಿತ್ರದ ಶೀರ್ಷಿಕೆಯನ್ನು ಈಗಾಗಲೇ ರೆಬಲ್ ಸ್ಟಾರ್ ಅಂಬರೀಶ್ ಅನಾವರಣ ಗೊಳಿಸಿದ್ದು, ಕಥೆ ಕೇಳಿರುವ ಚಾಲೆಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಚಿತ್ರದ ಚಿತ್ರೀಕರಣವೂ ಇದೇ ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com