ಗಿರ್ ಗಿಟ್ಲೆ ರವಿ ಕಿರಣ್ ಅವರ ಮುಂದಿನ ಚಿತ್ರದಲ್ಲಿ ಮಿತ್ರ ನಾಯಕ

Published on

356 Views

ಈ ವರ್ಷ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಗಿರ್ ಗಿಟ್ಲೆ ಚಿತ್ರವನ್ನು ನಿರ್ದೇಶನ ಮಾಡಿದ್ದ ರವಿ ಕಿರಣ್ ಅವರು ಮತ್ತೊಂದು ಚಿತ್ರವನ್ನು ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ರಾಗ ಚಿತ್ರದಲ್ಲಿ ನಟಿಸಿ ಕನ್ನಡಿಗರ ಮೆಚ್ವುಗೆ
ಪಡೆದಿದ್ದ ನಟ ಮಿತ್ರ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಮಿತ್ರ ಅವರ ಹುಟ್ಟು ಹಬ್ಬದ ಶುಭಾಶಯಗಳು ಕೋರಲೆಂದು ಈ ಚಿತ್ರದ
ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಗಿರ್ ಗಿಟ್ಲೆ ಚಿತ್ರವನ್ನು ನಿರ್ಮಾಣ ಮಾಡಿದ್ದ ಗಿರೀಶ್ ಎನ್ ಹಾಗೂ ವೆಂಕಟೇಶ್ ಎಸ್ ಅವರೇ ಈ ಚಿತ್ರವನ್ನು
ನಿರ್ಮಾಣ ಮಾಡಲಿದ್ದಾರೆ‌. ಬಹುತೇಕ ಗಿರ್ ಗಿಟ್ಲೆ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ. ಅರುಣ್ ಸುರೇಶ್ ಅವರ ಛಾಯಗ್ರಹಣ, ಸತೀಶ್ ಬಾಬು ಅವರ ಸಂಗೀತ ಸಂಯೋಜನೆ, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.
ರವಿ ಕಿರಣ್ ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆ

Copyright ©2026 . All Rights Reserved. privacy | terms Whatsapp: 9538193653 Email: hello@flixoye.com