ಕ್ರೀಮ್ ಬಿಸ್ಕೆಟ್ ಎಂಟಟ್ರೈನ್ಮೆಂಟ್ಸ್ ನಿಂದ ಮಿಸ್ಟರ್ ಅಂಡ್ ಮಿಸ್ ಯುನೈಟೆಡ್ ಕರ್ನಾಟಕ-2021 ಶೀಘ್ರದಲ್ಲಿ..

Published on

847 Views

ಒಂದು ವರ್ಷದ ಹಿಂದೆ ಕ್ರೀಮ್ ಬಿಸ್ಕೆಟ್ ಎಂಟರ್ಟೈನ್ಮೆಂಟ್ಸ್ ಎಂಬ ಸಂಸ್ಥೆ ಉದಯವಾಗಿತ್ತು. ಫ್ಯಾಷನ್ ಇವೆಂಟ್ಸ್, ಯ್ಯೂಟೂಬ್ ಕಂಟೆಂಟ್ ಹಾಗೂ ಸಿನಿಮಾ ಚಟುವಟಿಕೆಗಳಿಗೆಂದು ಶುರುವಾದ ಈ ಸಂಸ್ಥೆಯ ಲೋಗೋವನ್ನು IPS ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಬಿಡುಗಡೆ ಮಾಡಿ ಶುಭ ಕೋರಿದ್ದರು.

ಅದರ ಜೊತೆ ಜೊತೆಗೆ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಡಾಲಿ ಧನಂಜಯ, ಜೊತೆ ಜೊತೆಯಲಿ ಖ್ಯಾತಿಯ ಅನಿರುಧ್, ಡಾರ್ಲಿಂಗ್ ಕೃಷ್ಣ, ಕಿರಿಕ್ ಕೀರ್ತಿ, ಕನ್ನಡ ರ್ಯಾಪರ್ ಆಲ್ ಓಕೆ ಸೇರಿದಂತೆ ಚಿತ್ರರಂಗದ ಸಾಕಷ್ಟು ಕಲಾವಿದರು ಶುಭ ಕೋರಿ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಸಂಸ್ಥೆಯ ಮೊದಲ ಕಾರ್ಯಕ್ರಮವಾಗಿ ನಾಡು, ನುಡಿ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹೊಸಬರಿಗೆ ಅವಕಾಶ ಕೊಟ್ಟು ಪ್ರೋತ್ಸಾಹ ಮಾಡುತ್ತ ಟ್ರಡಿಷನಲ್ ಕಿಂಗ್ ಅಂಡ್ ಕ್ವೀನ್ ಎಂಬ ಫ್ಯಾಷನ್ ಇವೆಂಟೊಂದನ್ನು ಆಯೋಜಿಸಿ ಯಶಸ್ವಿಯಾಗಿತ್ತು.

ಈಗ ಸಂಸ್ಥೆಯ ಎರಡನೆ ಕಾರ್ಯಕ್ರಮವಾಗಿ ಕರ್ನಾಟಕದ ಅಖಂಡತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ Mr & Ms ಯುನೈಟೆಡ್ ಕರ್ನಾಟಕ 2021 ಎಂಬ ಇವೆಂಟಿಗೆ ಸದ್ದಿಲ್ಲದೆ ಕೆಲಸಗಳು ಶುರುವಾಗಿವೆ. ಕಾರ್ಯಕ್ರಮದ ಆಡಿಷನ್ ಅನ್ನು ಇದೆ ಭಾನುವಾರ…. ಅಂದರೆ 22-11-2020 ರಂದು ಬೆಳಿಗ್ಗೆ 10 ಘಂಟೆಗೆ ಕೆಳಕಂಡ ವಿಳಾಸದಲ್ಲಿ ಆಯೋಜಿಸಿದ್ದಾರೆ. ಆಸಕ್ತರು ಬಾಗವಹಿಸಬಹುದು.

BR Media House
3435, 4th Main Road,
Shastri nagar,Tyagarajanagar
Bengaluru-28

ಕ್ರೀಮ್ ಬಿಸ್ಕೆಟ್ ಎಂಟರ್ಟೈನ್ಮೆಂಟ್ಸ್ ಸಂಸ್ಥೆಯ ಎಲ್ಲಾ ಚಟುವಟಿಕೆಗಳಿಗು ಶುಭವಾಗಲಿ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com