ಕನ್ನಡದ ಹೆಮ್ಮೆಯ ಬಹುಮುಖ ಪ್ರತಿಭೆಯ ಮಿಮಿಕ್ರಿ ದಯಾನಂದ ! ದಯೆ’ಯಲ್ಲಿ ‘ಆನಂದ’ವಿದೆ ! – ಮಂಡ್ಯ ರಮೇಶ್

Published on

432 Views

‘ಕನಸುಗಾರ’ ಚಿತ್ರೀಕರಣ ಭರದಿಂದ ನಡೆದಿತ್ತು !
ಆ ಹೊತ್ತಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ನಟನೊಬ್ಬನನ್ನು ನಾನು ಸಮೀಪದಲ್ಲಿ ನೋಡಿದೆ.ನನ್ನನ್ನು ಕಂಡವರೇ ಹತ್ತಿರ ಕರೆದು, ಕುಳಿತು ಎಷ್ಟೋ ವರ್ಷಗಳ ಗೆಳೆಯ ಎಂಬಂತೆ ಮಾತನಾಡಿಸಿದರು.ರಂಗಭೂಮಿ, ಮಾಧ್ಯಮಗಳು ,ಸಾಮಾಜಿಕ ವರ್ತಮಾನ, ರಾಜಕೀಯ ,ಸಾಹಿತ್ಯ ..ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಲೇ ಹೋದರು.ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಪೋಷಕ ನಟ ಎಂದರೆ ಉಪ್ಪಿನಕಾಯಿ ಇದ್ದಹಾಗೆ! ಅಪರೂಪಕ್ಕೊಮ್ಮೆ ಬಂದು ಹೋಗುತ್ತೇವೆ ಅಷ್ಟೇ! ಶೂಟಿಂಗ್ನಲ್ಲಿ ತುಂಬಾ ಬಿಡುವು ಇರುತ್ತದೆ!.. ಆಗೆಲ್ಲ ಒಳ್ಳೆಯದನ್ನು ಕುರಿತು ಮಾತನಾಡುವ,, ಚರ್ಚೆಮಾಡಲು ಯಾರಾದರೂ ಸಿಕ್ಕದಿದ್ದರೆ ಅವನು ಬೋರ್ ಆಗುವುದಂತೂ ಗ್ಯಾರಂಟಿ ..ನನಗೆ ಕೆಲವೇ ಕ್ಷಣಗಳಲ್ಲಿ ಈ ವ್ಯಕ್ತಿ ಆಪ್ತನಾಗಿ ಬಿಟ್ಟರು. ಅವರ ಮಾತುಗಳಿಂದ ವಿಚಾರಗಳಿಂದ , ಸಾಧನೆಗಳಿಂದ, ಸಾಧ್ಯತೆಗಳಿಂದ ಪ್ರಭಾವಿತನಾದೆ ಆ ವ್ಯಕ್ತಿ ಕನ್ನಡದ ಹೆಮ್ಮೆಯ ಬಹುಮುಖ ಪ್ರತಿಭೆಯ #ಮಿಮಿಕ್ರಿ #ದಯಾನಂದ !
ಈ ಟಿವಿಯಲ್ಲಿ ಅವರು ನಡೆಸಿಕೊಡುತ್ತಿದ್ದ ಏಕವ್ಯಕ್ತಿ ಪ್ರದರ್ಶನಗಳು ಮತ್ತು ರಾಜಕುಮಾರ್ ಅಪಹರಣವಾದಾಗ ಅವರು ಸೃಷ್ಟಿಸಿದ ಸಿ .ಡಿ, ಅವರ ಅನೇಕ ವಿಚಾರಪೂರ್ಣ ಮತ್ತು ಆಕರ್ಷಕ ಗುಣಗಳು ಎರಡು ಮೇಳವಿಸಿದ ಅಪರೂಪದ ಮಿಮಿಕ್ರಿ ಕಾರ್ಯಕ್ರಮಗಳು,ಮಜಾ ಟಾಕೀಸ್ ಒಡನಾಟ ,ಆಸ್ಟ್ರೇಲಿಯಾ ಪ್ರವಾಸ.. ನನ್ನನ್ನುಮತ್ತಷ್ಟು ಹತ್ತಿರಕ್ಕೆ ಸೆಳೆಯಲು ಕಾರಣವಾದವು.
ಗುರು ಕಾರಂತರು ಮಿಮಿಕ್ರಿ ಎಂದರೆ ಅಷ್ಟೇನೂ ಹತ್ತಿರಕ್ಕೆ ಬಿಟ್ಟು ಕೊಂಡವರಲ್ಲ !ಆದರೆ ಈ ವ್ಯಕ್ತಿಯ ಮಿಮಿಕ್ರಿ ಗಳು ಇತರರಿಗಿಂತ ಭಿನ್ನವಾಗಿದ್ದವು ಆ ಕಾರಣಕ್ಕಾಗಿ ದಯಾನಂದರದೆ ಒಂದು ವಿಶಿಷ್ಟ ಶೈಲಿ ಇತ್ತು.
ನಟನ ಕಟ್ಟುವ ಆರಂಭದ ದಿನಗಳಲ್ಲಿ ಹಣದ ತೊಂದರೆಯಾಗಿ ನಾನು ಒದ್ದಾಡುತ್ತಿದ್ದ ನೋಡಿ ಒಮ್ಮೆ ಸಾಲ ಕೊಟ್ಟಿದ್ದರು! ಅದನ್ನು ಮರಳಿಸಿದೆ. ಪ್ರತಿವರ್ಷ ನಮ್ಮ ಮಕ್ಕಳ ಬೇಸಿಗೆ ರಂಗ ಶಿಬಿರ ರಜಾ-ಮಜಾಕ್ಕೆ ಆಗಮಿಸಿ, ಶಿಬಿರದ ಮಕ್ಕಳಿಗೆ ಧ್ವನಿಯ ಬಳಕೆ, ಏರಿಳಿತಗಳು, ಮಾತನಾಡುವ ಕಲೆಯನ್ನು ಕುರಿತು ವೈಶಿಷ್ಟ್ಯಪೂರ್ಣವಾಗಿ ತರಬೇತು ಗೊಳಿಸಿದರು.


ಇವತ್ತಿಗೂ ಅವರೊಂದಿಗೆ ಮಾತನಾಡುತ್ತಿದ್ದರೆ, ಕಲಾವಿದನೊಬ್ಬನ ಯಾನವೊಂದನ್ನು ನವಿರಾದ ನಿರೂಪಣೆಯೊಂದಿಗೆ ಮನದಣಿಯೆ ಸವಿಯಬಹುದು. ಸಾವಿರಾರು ಕಾರ್ಯಕ್ರಮಗಳು, ಅಸಂಖ್ಯ ವಿದೇಶ ಪ್ರವಾಸಗಳು, ಲಕ್ಷಾಂತರ ಅಭಿಮಾನಿಗಳು, ಎಲ್ಲವನ್ನು ಮೀರಿ ಮಾನವೀಯ ನೆಲೆಯಲ್ಲಿಯೇ ಮನದಣಿಯೆ ಅನುಭವಿಸುವ ಕಥನ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ.
ಕಾರ್ಯಕ್ರಮಗಳಿಗೆ ಸುತ್ತಿ ಸುತ್ತಿ ಸುಸ್ತಾಗಿದ್ದಾರೆ, ಚೈತನ್ಯ ಬತ್ತಿಲ್ಲ!
“ಮನೆಗೆ ಬಾ” ಅಂತ ಫೋನಾಯಿಸಿದರು!
ಇವತ್ತು ಹೋದೆ,
ಅವರನ್ನು ಜನಪ್ರೀತಿ ಮಾಡಿರುವ ರೀತಿ ನೋಡಿ ಬೆರಗಾದೆ .
ನಟನದ ನಾಟಕಗಳಿಗೆ ಸಹಾಯವಾಗುವ ಅನೇಕ ಕೋಟು, ವಿಗ್ ಗಳನ್ನು ಕಾರಿನ ತುಂಬೆಲ್ಲ ಭರ್ತಿ ತುಂಬಿ ಬಿಟ್ಟರು.!
ಸ್ನೇಹಕ್ಕೆ, ಮಾತು ಬಾರದಾಯಿತು!
ಎದ್ದು ಬರುವ ಮುಂಚೆ “ಏನು ಬೇಕು”? ಎಂದರು . ಮೇಲಂತಸ್ತಿನಲ್ಲಿ #ಬಾಬಾಸಾಹೇಬರು ನಿಂತಿದ್ದರು.
ಅಪರೂಪದ ಮೂರ್ತಿ.”ಅದು ಬೇಕು” ಅಂದೆ ಪ್ರೀತಿಯಿಂದ “ತೆಗೆದುಕೋ” ಅಂತ ಕೊಟ್ಟರು.
ಮರಳಿ ಬರುವಾಗ ಶಿಷ್ಯ ಜಗ್ಗಿ “ಅದೇನು ಸರ್ ಅಂಬೇಡ್ಕರ್ ತೆಗೆದುಕೊಂಡಿದ್ದು” ಅಂದ.
“ನೀನ್ ಇವತ್ತು ನನ್ನ ಪಕ್ಕದಲ್ಲಿ ಇರೋದಕ್ಕೆ ಅವರೇ ಕಾರಣ”
ಅಂದೆ ನಗುತ್ತಾ !
‘ನಟನ’ ದಲ್ಲಿ ಈಗಾಗಲೇ ಗಾಂಧಿ ಕೂತಿದ್ದಾರೆ.ಈಗ ನಿಂತ ಅಂಬೇಡ್ಕರ್ ಬಂದರು .ಒಳಗೆ ಬುದ್ಧ- ಬಸವಣ್ಣ ವಿವೇಕಾನಂದ ,ಕುವೆಂಪು- ಕಾರಂತರು ಇದ್ದಾರೆ ..”ಇವರ ಘರ್ಷಣೆಗಳಲ್ಲಿ- ಹೊಂದಾಣಿಕೆಯಲ್ಲಿ
ನಾವು ಬದುಕಬೇಕು” ಅಂದೆ!
ಮಗ ಶಿಶಿರ “ಕಷ್ಟ” ಅಂದ !.
“ಗೊತ್ತು” ಎಂದು ನಕ್ಕೆ!
‘#ದಯೆ’ಯಲ್ಲಿ ‘#ಆನಂದ’ವಿದೆ !🙏

More Buzz

Buzz 7 days ago

ಕೇವಲ ಮೋಷನ್ ಪೋಸ್ಟರ್ ಮೂಲಕವೇ ದೊಡ್ಡ ಕ್ರೇಜ಼್ ಹುಟ್ಟಿಸಿದ ‘ಕೆಂಡ’- ಟೀಸರ್ ಇಲ್ಲಿದೆ ನೋಡಿ

Buzz 1 week ago

ಎರಡನೇ ದಿನವೂ ಪ್ರಭಾಸ್ ನಟನೆಯ ಕಲ್ಕಿ 2898AD ಕಮಾಲ್ – ಎರಡೇ ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು ಗೊತ್ತಾ?

BuzzTollywood Buzz 1 week ago

ಈ ಓಟಿಟಿಯಲ್ಲಿ ಶೀಘ್ರವೇ ಬರಲಿದೆ Kalki 2898 AD – ಆದರೂ‌ ಚಿತ್ರದ ಥಿಯೇಟರ್ ಅನುಭವವೇ ಬೇರೆ

Buzzfilm of the dayGalleryTollywood Buzz 1 week ago

ಕಲ್ಕಿ 2898 AD ಟಿಕೆಟ್‌ಗೆ ರಾಜಮೌಳಿ ಕ್ಯೂ ನಿಂತ ಫೋಟೋ ವೈರಲ್ – ಮೂವೀ ಪವರ್ ಎಂದ ನೆಟ್ಟಿಗರು

Buzzfilm of the dayFull MoviesTollywood Buzz 1 week ago

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಕಲ್ಕಿ 2898 AD ಚಿತ್ರ ಹೇಗಿದೆ? – ಇಲ್ಲಿದೆ ನೋಡಿ ಚುಟುಕು ವಿಮರ್ಶೆ

Buzz 2 weeks ago

ತರುಣ್‌ ಸುಧೀರ್‌ ಜೊತೆ ಹಸೆಮಣೆ ಏರಲಿದ್ದಾರೆಯೇ ರಾಬರ್ಟ್‌ ಬೆಡಗಿ ಸೋನಲ್!? – ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು

BuzzGalleryTrailers 2 weeks ago

ಕಲ್ಕಿ 2898 AD ಚಿತ್ರದ ಬುಜ್ಜಿ ಚಲಾಯಿಸಿದ ರಿಷಭ್ ಶೆಟ್ಟಿ – ಇಲ್ಲಿದೆ ನೋಡಿ ಎಕ್ಸ್’ಕ್ಲೂಸಿವ್ ವಿಡಿಯೋ

Buzz 2 weeks ago

“ಹಾಯ್‌ ಟೈಗರ್, ಹಾಯ್‌ ಬಾಸ್”!!!! – ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದು ಯಾರು?

Buzzfilm of the dayFull Movies 2 weeks ago

ಲವ್ಲಿ ಆಗಿ ಜನರ ಮನಸ್ಸು ಗೆದ್ದ ವಸಿಷ್ಟ ಸಿಂಹರ ಲವ್…ಲಿ

Buzz 4 weeks ago

ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕೊನೆಗೂ ಬಯಲಾಯ್ತು ಕಾರಣ – ಇಲ್ಲಿದೆ ನೋಡಿ ಸತ್ಯ

Buzz 4 weeks ago

ಯುವರಾಜ್‌ ಕುಮಾರ್‌ ದಂಪತಿಗಳ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ!!? ಏನಿದು ವಿವಾದ?

Buzz 4 weeks ago

ಸ್ಯಾಂಡಲ್ ವುಡ್ ನಲ್ಲಿ ಕೊಲೆ ಸದ್ದು – ನಟ ದರ್ಶನ್ ತನ್ನ ಅಭಿಮಾನಿಗೆ ಮಾಡಿದ್ದೇನು?

Copyright ©2024 . All Rights Reserved. privacy | terms Whatsapp: 9538193653 Email: hello@flixoye.com