ಸ್ನೇಹರ್ಷಿಯ ಮೊದಲ ಸಾಂಗ್ ಗೆ ಮಿಲಿಯನ್ ಸಂಭ್ರಮ

Published on

457 Views

ಯಾವುದೇ ಚಿತ್ರರಂಗದ ಶಿಫಾರಸ್ಸು ಇಲ್ಲದೇ, ಸ್ವಂತ ಪರಿಶ್ರಮದ ಮೂಲಕ ರಂಗಭೂಮಿಯಿಂದ ನೇರವಾಗಿ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಸ್ನೇಹರ್ಷಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿರುವ ಕಿರಣ್ ನಾರಾಯಣ್ ಈಗ ಸುದ್ಧಿಯಲ್ಲಿದ್ದಾರೆ.

ಹೌದು ಕಿರಣ್ ನಾರಾಯಣ್ ನಟನೆ ಹಾಗೂ ನಿರ್ದೇಶನದ ಚೊಚ್ಚಲ ಚಿತ್ರ ಸ್ನೇಹರ್ಷಿಯ ಮೊದಲ ವೀಡಿಯೋ ಸಾಂಗ್ ” ಮೊದಲ ಹೆಜ್ಜೆಗೆ ತಮಟೆ ಸೌಂಡಿಗೆ ” ಈಗಾಗಲೇ ಡಿಬೀಟ್ಸ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ 10 ಲಕ್ಷ ವೀಕ್ಷಣೆಯ ಸವಿಯನ್ನು ಕಂಡಿದೆ.

ಸಾಂಗ್ ಮ್ಯೂಸಿಕ್ ಬೀಟ್ಸ್ , ಕ್ಯಾಮೆರಾ ಹಾಗೂ ಮೇಕಿಂಗ್ ಕ್ವಾಲಿಟಿ , ನವೀನ್ ಸಜ್ಜುರವರ ವಾಯ್ಸ್, ಎಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಅನುಭವಿ ನೃತ್ಯಗಾರ ,ನಟನಿಗಿಂತಲೂ ಕಮ್ಮಿಯಿಲ್ಲದಂತೆ ಕಿರಣ್ ನಾರಾಯಣ್ ರವರ ನೃತ್ಯದ ಪರಿ ಪ್ರೇಕ್ಷಕರ ಮನಗೆದ್ದಿರೋದಂತೂ ಸುಳ್ಳಲ್ಲ.

ಕಿರಣ್ ನಾರಾಯಣ್ ರವರನ್ನು ವೀಕ್ಷಕರು ಮೊದಲ ಹೆಜ್ಜೆ ಸಾಂಗ್ ನ ಮಿಲಿಯನ್ ವೀಕ್ಷಣೆಯ ಮೂಲಕ ಅಪ್ಪಿಕೊಂಡಿರುವ ಪರಿಯೇ ಸಾಕು ಈ ಚಿತ್ರ ಮುಂದಿನ ದಿನಗಳಲ್ಲಿ ದೊಡ್ಡ ಸದ್ದು ಮಾಡಲಿದೆ ಎನ್ನುವುದಕ್ಕೆ.

ಹೊಸಬರ ಚಿತ್ರಗಳು ಮೂಲೆಗೆ ಬಿದ್ದಿರುವ ಸಂದರ್ಭದಲ್ಲಿ ಕಿರಣ್ ನಾರಾಯಣ್ ರವರ ಚೊಚ್ಚಲ ಚಿತ್ರದ ಮೊದಲ ಸಾಂಗೇ ಮಿಲಿಯನ್ ವೀಕ್ಷಣೆ ಪೂರೈಸಿರೋದು ಯುವನಟರಿಗೆ ಹಾಗೂ ಯುವಚಿತ್ರತಂಡಗಳಿಗೆ ಚಿತ್ರ ಮಾಡುವ ಸ್ಪೂರ್ತಿ ನೀಡಿದೆ ಎಂದರೆ ತಪ್ಪಾಗಲಾರದು.

ಈ ಸನ್ನಿವೇಶದಲ್ಲಿ ಸ್ನೇಹರ್ಷಿ ಚಿತ್ರದ ಮೊದಲ ಹೆಜ್ಜೆಗೆ ಸಾಂಗ್ ಹಾಗೂ ಕಿರಣ್ ನಾರಾಯಣ್ ರವರ ಅಮೋಘ ಸ್ಟೆಪ್ಸ್ ವೀಕ್ಷಕರಿಗೆ ಮನೋರಂಜನೆ ಕೊಡುತ್ತಿರೋದಂತೂ ಸುಳ್ಳಲ್ಲ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com