Mr. ಬ್ಯಾಚುಲರ್ ಜೊತೆ ಮಿಲನ ನಾಗರಾಜ್ ಮತ್ತು ನಿಮಿಕಾ ರತ್ನಾಕರ್

Published on

599 Views

ಲವ್ ಮಾಕ್ಟೈಲ್ ನಂತರ ಮತ್ತೆ ಹಿಟ್ ಜೋಡಿ ತೆರೆ ಮೇಲೆ ಜೊತೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಹೌದು ನಾಯ್ಡು ಬಂದರ್ ಆಕ್ಷನ್ ಕಟ್ ಹೇಳುತ್ತಿರುವ Mr. ಬ್ಯಾಚುಲರ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜೋಡಿಯಾಗಿ ನಟಿಸುತ್ತಿದ್ದು, ನಿಮಿಕಾ ರತ್ನಾಕರ್ ಸಹ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಶ್ರೀನಿವಾಸ್ ಮತ್ತು ಸ್ವರ್ಣಲತಾ ಚಿತ್ರಕ್ಕೆ ಬಂಡವಾಳ ಹೂಡುತಿದ್ದು, ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಮೂಸಿಕ್ ಮಾಡುತ್ತಿದ್ದು, ಲವ್ ಮಾಕ್ಟೇಲ್ ಖ್ಯಾತಿಯ ಶ್ರೀ ಕ್ರೇಜಿ ಮೈಂಡ್ಸ್ ಕ್ಯಾಮೆರಾ ಹಿಡಿದು ಎಡಿಟಿಂಗ್ ಮಾಡ್ತಿದ್ದಾರೆ.

ಮಜಾ ಟಾಕೀಸ್ ಖ್ಯಾತಿಯ ರಾಜಶೇಖರ್ ಡೈಲಾಗ್ ಬರೆಯುತ್ತಿದ್ದು, ನಾಗೇಂದ್ರ ಪ್ರಸಾದ್ ಮತ್ತು ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಸಿನೆಮಾ ತಂಡ ಚಿತ್ರೀಕರಣಕ್ಕೆ ತೆರಳಲು ರೆಡಿಯಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com