ಮೇಲೊಬ್ಬ ಮಾಯಾವಿ ಹಾಡುಗಳು ನಾಳೆ ಬಿಡುಗಡೆಯಾಗಲಿವೆ

Published on

357 Views

ಶ್ರೀಕಟೀಲು ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪುತ್ತೂರು ಭರತ್ ಹಾಗೂ
ತನ್ವಿ ಅಮಿನ್ ಕೊಲ್ಯ ಅವರ ನಿರ್ಮಾಣದಲ್ಲಿ ಸಂಚಾರಿ ವಿಜಯ್ ಚಕ್ರವರ್ತಿ ಚಂದ್ರಚೂಡ್ ಹಾಗೂ ಅನನ್ಯ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಮೇಲೊಬ್ಬ ಮಾಯಾವಿ ಚಿತ್ರದ ಹಾಡುಗಳು ನಾಳೆ ಬಿಡುಗಡೆಯಾಗುತ್ತಿವೆ.

ಬಿ.ನವೀನ್ ಕೃಷ್ಣ ಎಂಬುವವರು ಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ದಿ||.ಎಲ್.ಎನ್.ಶಾಸ್ತೀ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಅವರೇ ಚಿತ್ರಕಥೆ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ‌. ಇನ್ನು ಕನ್ನಡ ಚಿತ್ರರಂಗವನ್ನು ಯುಗಯುಗಳಿಂದ ಕಾಪಾಡುತ್ತಿರುವ ಮೂವರು ಮಾಯಾವಿಗಳು ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ. ನಾಳೆ ಸಂಜೆ 7:00ಕ್ಕೆ ನಗರದ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಹಾಡುಗಳ ಬಿಡುಗಡೆ ಸಮಾರಂಭ ನಡೆಯಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com