ಮೇಘನರಾಜ್ ತಾಯಿ ಪ್ರಮೀಳಾ ಜೋಷಾಯ್ ಆಸ್ಪತ್ರೆಗೆ ದಾಖಲು

ಇತ್ತೀಚಿಗೆ ತಮ್ಮ ಮಗುವಿನ ತೊಟ್ಟಿಲ ಶಾಸ್ತ್ರ ಮುಗಿಸಿಕೊಂಡು ಖುಷಿಯಾಗಿ ಮಗುವಿನ ಜೊತೆ ಸಮಯ ಕಳೆಯುತ್ತಿದ್ದ ಮೇಘನರಾಜ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಾಯಿ ಪ್ರಮೀಳಾ ಜೋಷಾಯ್ ಅಸ್ವಸ್ಥರಾಗಿದ್ದು, ಜಯನಗರದ ಎಕ್ಸೈಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಏನಾಗಿದೆ ಎಂಬ ಸ್ಪಷ್ಟ ಮಾಹಿತಿ ಮಾತ್ರ ಇನ್ನು ಸಿಕ್ಕಿಲ್ಲ.
ದಿಡೀರ್ ಅನಾರೋಗ್ಯಕ್ಕೆ ಈಡಾಗಿರುವ ಪ್ರಮೀಳಾ ಜೋಷಾಯ್ ರವರನ್ನು ನೋಡಿ ಕುಟುಂಬಸ್ಥರು ಅಭಿಮಾನಿಗಳು ಆತಂಕಗೊಳಗಾಗಿದ್ದಾರೆ. ಅಂದಾಜು 3 ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಮೀಳಾ ಜೋಷಾಯ್ 170ಕ್ಕೂ ಹೆಚ್ಚಿನ ಚಿತ್ರದಲ್ಲಿ ಅಭಿನಯಿಸಿರುವ ಅವರು ಆಸ್ಪತ್ರೆಗೆ ದಾಖಲಿರುವುದರಿಂದ ಕೆಲವು ಮೂಲಗಳ ಪ್ರಕಾರ ಪ್ರಮೀಳಾ ಜೋಷಾಯ್ ರವರಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಮನೆಯಲ್ಲಿ ಮಗು ಇರುವ ಕಾರಣ ಅವರನ್ನು ಸುರಕ್ಷತೆಯ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಅದರೆ ಅಧಿಕೃತವಾಗಿ ಸುಂದರ್ ರಾಜ್ ಆಗಲಿ ಮೇಘನರಾಜ್ ಆಗಲಿ ಯಾರು ಅದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ.