ಜೂನಿಯರ್ ‘ಚಿರು’ ಗೆ ಜನ್ಮ ನೀಡಿದ ಮೇಘನಾರಾಜ್…

Published on

359 Views

ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬಗಳಿಗೆ ಇಂದು ಸಂಭ್ರಮವೇ ಸಂಭ್ರಮ ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಎಲ್ಲರ ಆಸೆಯಂತೆ ಜೂನಿಯರ್ ಚಿರುಗೆ ಜನ್ಮ ನೀಡಿದ್ದಾರೆ. ಕೆ.ಆರ್ ನಗರದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೇಘನಾರಾಜ್ ಇಂದು ಬೆಳಗ್ಗೆ 11.07 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಚಿರಂಜೀವಿ ಸರ್ಜಾ ಮತ್ತೆ ಹುಟ್ಟಿ ಬಂದಿದ್ದಾರೆ.

ಮಗುವಿನ ಮುಖವನ್ನು ಮೊದಲು ಆಸ್ಪತ್ರೆಯಲ್ಲಿ ಅಳವಡಿಸಲಾದ ಚಿರಂಜೀವಿ ಸರ್ಜಾ ಭಾವಚಿತ್ರದ ಮುಂದೆ ಇರಿಸಿ, ತಂದೆಯ ಮುಖವನ್ನು ತೋರಿಸಲಾಯಿತು. ಚಿರು ಸರ್ಜಾ ಮತ್ತೆ ಮೇಘನಾರಾಜ್ ಹೊಟ್ಟೆಯಲ್ಲಿ ಹುಟ್ಟಿ‌ ಬರಲಿ ಎಂದು ಲಕ್ಷಾಂತರ ಅಭಿಮಾನಿಗಳು ಹಾರೈಸಿದ್ದರು. ಮೇಘನಾರಾಜ್ ಕುಟುಂಬ, ಸರ್ಜಾ ಕುಟುಂಬ ಕೂಡ ಚಿರು ಮತ್ತೆ ಹುಟ್ಟಿ ಬರುತ್ತಾನೆ ಎಂದು ಕನಸು ಕಂಡಿದ್ದರು. ಅದರಂತೆ ಅವರ ಕನಸು ನೆರವೇರಿದೆ. ಅಭಿಮಾನಿಗಳ ಆಸೆ ಈಡೇರಿದೆ. ಎಲ್ಲರೂ ಸಂತಸದಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com