ಮತ್ತೊಮ್ಮೆ ತೆರೆಗೆ ಶಿವಾರ್ಜುನ… ಖುಷಿ‌ ಹಂಚಿಕೊಂಡ ಮೇಘನಾರಾಜ್…!

Published on

411 Views

ಚಿರು ಸರ್ಜಾ ಅಭಿನಯದ ಕೊನೆಯ ಚಿತ್ರ ‘ಶಿವಾರ್ಜುನ’ ಇತ್ತೀಚೆಗೆ ಚಿತ್ರರಂಗವನ್ನು ಅಗಲಿದ ಚಿರುರವರು ಬದುಕಿದ್ದರೆ ಇನ್ನಷ್ಟು ಸಿನಿಮಾಗಳಲ್ಲಿ ಮಿಂಚುತ್ತಿದ್ದರು. ಅದ್ರೆ ವಿಧಿಯಾಟಕ್ಕೆ ಬಲಿಯಾದರು.

ಈಗ ಕೊರೋನಾದಿಂದ ಬಾಗಿಲು ಮುಚ್ಚಿದ ಥಿಯೇಟರ್ ಗಳು ಅಕ್ಟೋಬರ್‌ 15 ರಿಂದ ಕಾರ್ಯಾರಂಭ ಮಾಡಲು ಸರಕಾರ ಅನುಮತಿ ನೀಡಿದೆ. ಮಾರ್ಚ್ 12 ರಂದು ತೆರೆಕಂಡಿದ್ದ, ಶಿವತೇಜಾ ನಿರ್ದೇಶನದ ‘ಶಿವಾರ್ಜುನ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿತ್ತು. ಕೊರೋನಾದಿಂದ ಲಾಕ್ ಡಾನ್ ಹೊಡೆತದಿಂದ ಸಿನಿಮಾದ ಪ್ರದರ್ಶನವು ನಿಂತು ಹೋಯಿತು.

ತೆರೆಕಂಡಿದ ‘ಶಿವಾರ್ಜುನ’ ಕೊರೋನಾ ದ ಎಪೆಕ್ಟ್ ನಿಂದಾಗಿ ಥಿಯೇಟರ್ ಗಳು ಬಂದ್ ಆಗಿ ಚಿತ್ರ ಪ್ರದರ್ಶನವು ನಿಂತು ಹೋಯಿತು. “ಈಗ ಮತ್ತೊಮ್ಮೆ ‘ಶಿವಾರ್ಜುನ’ ಸಿನಿಮಾ ರಿಲೀಸ್ ಆಗಲಿದ್ದು, ‘ಶಿವಾರ್ಜುನ’ ಚಿತ್ರದ ಮೂಲಕ ಮತ್ತೊಮ್ಮೆ ಚಿರು ಬರಲಿದ್ದಾರೆ. ಅಕ್ಟೋಬರ್ 17ಕ್ಕೆ ಚಿರು ಅವರದು ಹುಟ್ಟುಹಬ್ಬ ಅಕ್ಟೋಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದೆ” ಎಂದು ಈ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ ಮೇಘನಾರಾಜ್.

‘ಶಿವಾರ್ಜುನ’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಚಿರಜೀವಿ ಸರ್ಜಾ. ಈವಾಗ‌ ಚಿರು ಸರ್ಜಾ ನಮ್ಮೊಂದಿಗೆ ಇಲ್ಲ. ಅದರೆ ಅವರ ಅಭಿನಯದ ಚಿತ್ರ ಲಾಕ್ ಡೌನ್ ನಿಂದ ಸರಿಯಾಗಿ ಪ್ರದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಚಿತ್ರ‌ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದಾರೆ. ‘ಶಿವಾರ್ಜುನ’ ಚಿತ್ರದ ಮೂಲಕ ಮತ್ತೆ ಬರಲಿದ್ದಾರೆ ಚಿರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com