ಚಂದನ್ ಶೆಟ್ಟಿ ಜೊತೆ‌ ಹೆಜ್ಜೆ ಹಾಕಿದ ಮೇಘಾ ಶೆಟ್ಟಿ..!!

Published on

516 Views

ಚಂದನ್ ಶೆಟ್ಟಿ ಇದೀಗ ಮತ್ತೊಂದು ಆಲ್ಬಂ ಸಾಂಗ್ ನ ತಯಾರಿಯಲ್ಲಿದ್ದಾರೆ. ಚಂದನ್ ಸಂಗೀತ ನೀಡಿ, ಅವರೇ ಹಾಡಿರುವ ‘ನೋಡು ಶಿವ…’ ಎನ್ನುವ ಹಾಡಿಗೆ ಸುಮಿತ್ ಎಂ.ಕೆ ಸಾಹಿತ್ಯ ರಚಿಸಿದ್ದಾರೆ. ಜೊತೆಗೆ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಗ್ಲಾಮರ್ ಲುಕ್ ನಲ್ಲಿ ‘ಜೊತೆ ಜೊತೆಯಲ್ಲಿ’ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಎಎಂಸಿ ಸಿಟಿ ಗ್ರೂಪ್ ಆಫ್ ಇನ್ಸಿಟ್ಯೂಷನ್ ಸೇರಿ ಒಟ್ಟು 9 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಮತ್ತು ಆ ಸಂಸ್ಥೆ ಯ ವೈಸ್ ಪ್ರೆಸಿಡೆಂಟ್ ಆಗಿರುವ ಮೋನಿಕಾ ಕಲ್ಲೂರಿ, ಈ ಆಲ್ಬಂ ಹಾಡಿನ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.


‘ನೋಡು ಶಿವಾ..’ ಸಾಲುಗಳಿಂದ ಪ್ರಾರಂಭವಾಗುವ ಹಾಡು ಎಷ್ಟೋ ಜನ ಜೀವನದಲ್ಲಿ ಅಂದುಕೊಂಡಿದ್ದು ಏನು ಆಗಿಲ್ಲ ಎಂದು ತಮ್ಮನ್ನೇ ತಾವೇ ದೂರಲು ಶುರುಮಾಡುತ್ತಾರೆ. ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ ಯಾವುದೇ ಯಶಸ್ಸು ಸಿಕ್ಕಿರುವುದಿಲ್ಲ. ಈ ಥರದ ಹುಡುಗ ದೇವರ ಬಳಿ ತನ್ನ ಗೋಳನ್ನು ಹೇಗೆ ಹೇಳುತ್ತಾನೆ ಎಂಬುದನ್ನು ಫನ್ನಿಯಾಗಿ ಹಾಡಿನಲ್ಲಿ ತೋರಿಸಲಿದ್ದೇವೆ. ಕನ್ನಡದಲ್ಲಿ ಇಲ್ಲಿಯವರೆಗೂ ಯಾರು ಮಾಡದ ಅದ್ದೂರಿ ಹಾಡನ್ನು ನಾವು ಚಿತ್ರೀಕರಿಸಿದ್ದೇವೆ. ಇದರಲ್ಲಿ ಹೊಸತನವಿದ್ದು, ಅದ್ದೂರಿ ವೆಚ್ಚದಲ್ಲಿ ಸಿದ್ದವಾಗಲಿದೆ. 30 ಲಕ್ಷ ರೂಪಾಯಿ ಬಜೆಟ್ ನಲ್ಲಿ ಈ ಹಾಡು ಸಿದ್ಧವಾಗಲಿದೆ ಎನ್ನುತ್ತಾರೆ ಮೋನಿಕಾ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com