ಇದೇ ತಿಂಗಳಲ್ಲಿ ‘’ಮೇಘಾ ಅಲಿಯಾಸ್ ಮ್ಯಾಗಿ’’

Published on

263 Views

ಮಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ವಿನಯ್ ಕುಮಾರ್ ನಿರ್ಮಿಸುತ್ತಿರುವ ‘’ಮೇಘಾ ಅಲಿಯಾಸ್ ಮ್ಯಾಗಿ’’ ಯ ರೋಚಕ ಕಥಾನಕ ಹೊಂದಿರುವ ಚಿತ್ರ ‘’ಮೇಘಾ ಅಲಿಯಾಸ್ ಮ್ಯಾಗಿ’’ ಚಿತ್ರವನ್ನು ವಿಶಾಲ್ ಪುಟ್ಟಣ್ಣ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಚಿತ್ರವು ಇದೇ ತಿಂಗಳ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೆಣ್ಣೊಬ್ಬಳ ಮನದ ಭಾವೋದ್ವೇಗದ ಕಥಾನಕವನ್ನು ಒಳಗೊಂಡಿರುವ ಈ ಚಿತ್ರವು ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕಥೆಯನ್ನು ಹೊಂದಿದೆ. ಸುಕೃತಾ ವಾಗ್ಲೆ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಕಳಸಾ ಹಾಗೂ ಕುಂದಾಪುರದ ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ.


ಚಿತ್ರಕ್ಕೆ ಜಿನಿಸ್ ಪೈಕ್ಕಟ್ಟು ಹಾಗೂ ಜಯಪ್ರಕಾಶ್ ಛಾಯಾಗ್ರಹಣ, ಅತಿಶಯ ಜೈನ್ ಸಂಗೀತ, ಪರಮೇಶ್ ಸಂಭಾಷಣೆ, ವಿನಯ್ ಕುಮಾರ್ ಕೂರ್ಗು ಸಂಕಲನ, ವಿನು ಮನಸು ಹಿನ್ನೆಲೆ ಸಂಗೀತ, ರಘು ಎಸ್, ಸೈ ಅರುಣ್ ಕುಮಾರ್ ನೃತ್ಯ ನಿರ್ದೇಶನ, ಮಲ್ಲಿಕಾರ್ಜುನ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಸುಕೃತ ವಾಗ್ಲೆ, ತೇಜ್ ಗೌಡ, ನೀತು ಬಾಲ, ಕಿರಣ್ ಕುಮಾರ್, ಮಂಜು ಪಾವಗಡ, ಅಶ್ವಿನ್ ಕುಮಾರ್, ಮಹೇಶ್ ಗೌಡ, ನಟರಾಜ್, ತನುಷ, ಇನ್ನು ಮುಂತಾದವರು ತಾರಾಬಳಗದಲ್ಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com