ಹಿಂದಿಯ ‘ಕೆಜಿಎಫ್’ ನಲ್ಲಿ ತಮನ್ನಾ ಬದಲು ಮೌನಿರಾಯ್

Published on

314 Views

ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ ‘ಕೆಜಿಎಫ್’ ಸಿನಿಮಾ ಡಿಸೆಂಬರ್ 21ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ. 5 ಭಾಷೆಗಳಲ್ಲಿ ತೆರೆ ಕಾಣಲಿರುವ ‘ಕೆಜಿಎಫ್’ ಈಗಾಗಲೇ ಎರಡು ಟ್ರೇಲರ್ , ಒಂದು ಹಾಡನ್ನು ಬಿಡುಗಡೆ ಮಾಡಿ, ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿರುವ ‘ಕೆಜಿಎಫ್’ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದೆ. ‘ಕೆಜಿಎಫ್’ ಸಿನಿಮಾದ ಒಂದು‌ ಹಾಡಿನಲ್ಲಿ ಯಶ್ ಜೊತೆ ತಮನ್ನಾ ‘ಜೋಕೆ ನಾನು ಬಳ್ಳಿಯ ಮಿಂಚು…’ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದ್ರೆ ಇಲ್ಲೊಂದು‌ ಸಣ್ಣ ಬದಲಾವಣೆ ಏನಂದ್ರೆ ಹಿಂದಿಯ ‘ಕೆಜಿಎಫ್’ ಚಿತ್ರದ ಈ ಹಾಡಿನಲ್ಲಿ ‘ ಜೋಕೆ ನಾನು ಬಳ್ಳಿಯ ಮಿಂಚು ‘ ಹಾಡಿನ ಬದಲು 1989ರಲ್ಲಿ ತೆರೆಕಂಡಿದ್ದು ‘ತ್ರಿದೇವ್’ ಚಿತ್ರದ ‘ಗಲಿ ಗಲಿ ಮೇ’ ಹಾಡನ್ನು ರೀ ಕ್ರಿಯೆಟ್ ಮಾಡುತ್ತಿದ್ದಾರಂತೆ.

ಈ ಹಾಡಿನಲ್ಲಿ ತಮನ್ನಾ ಬದಲು ಖ್ಯಾತ ಬಾಲಿವುಡ್ ನಟಿ ಮೌನಿರಾಯ್ ಡ್ಯಾನ್ಸ್ ಮಾಡಲಿದ್ದಾರೆ. ಯಶ್ ಮತ್ತು ಮೌನಿ ರಾಯ್ ಜೋಡಿಯ ಹಾಡನ್ನು ಮತ್ತೆ ರೀ‌ ಶೂಟ್ ಮಾಡುತ್ತಿದ್ದಾರೆ. ಚಿತ್ರದ ಪ್ರಚಾರದಲ್ಲಿ ಮುಂಬೈನಲ್ಲಿ ಬಿಡು ಬಿಟ್ಟಿರುವ ಯಶ್ ಅಲ್ಲಿಯೇ ಡಿಸೆಂಬರ್ 7-8 ಎರಡು ದಿನ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ನಂತರ ಹೈದರಾಬಾದ್ ನಲ್ಲಿ ಡಿಸೆಂಬರ್ 9 ರಂದು ನಡೆಯುವ ಪ್ರೀ – ರಿಲೀಸ್ ಕಾರ್ಯಕ್ರಮಕ್ಕೆ ಯಶ್ ಹೋಗಬೇಕಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com