ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ಮತ್ತೆ ಉದ್ಭವ

Published on

423 Views

ಅನಂತ್ ನಾಗ್ ನಾಯಕನಾಗಿ ನಟಿಸಿ ಕೊಡ್ಲು ರಾಮಕೃಷ್ಣ ಅವರು
ನಿರ್ದೇಶನ ಮಾಡಿದ್ದ ಉದ್ಭವ ಚಿತ್ರವು 90ರ ದಶಕದಲ್ಲಿ ತೆರೆಕಂಡು
ಜನಮೆಚ್ಚುಗೆ ಪಡೆದಿತ್ತು. ಈಗ ಕೊಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ
ಮತ್ತೆ ಉದ್ಭವ ಶೀರ್ಷಿಕೆಯಲ್ಲಿ ಸೀಕ್ವೇಲ್ ನಲ್ಲಿ ಬರಲಿದೆ. ಈ ಚಿತ್ರದ
ಟೀಸರ್ ಬಿಡುಗಡೆಯಾಗಿದ್ದು ಚಿತ್ರದ ಮೇಲೆ ನಿರೀಕ್ಷೆ ಹುಟ್ಟು ಹಾಕಿದೆ.
ಗೀತಾ ಬ್ಯಾಂಗಲ್ ಸ್ಟೋರ್, ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ನಟಿಸಿದ್ದ
ಪ್ರಮೋದ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು,ಅವಿನಾಶ್
ಹಾಗೂ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ವಿ ಮನೋಹರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com