Martin Movie Trailer : ಧ್ರುವ ಸರ್ಜಾ ಆಕ್ಷನ್ ಟೀಸರ್ ಗೆ ಫ್ಯಾನ್ಸ್ ಫುಲ್ ಫಿದಾ

Published on

963 Views

ಬಹುನಿರೀಕ್ಷಿತ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರದ ಟ್ರೈಲರ್ (Martin Movie Trailer) ರಿಲೀಸ್ ಆಗಿದ್ದು, ದೇಶಾದ್ಯಂತ ಸಿನಿಪ್ರಿಯರಲ್ಲಿ ಹೊಸ ಕ್ರೇಜ್ ಹುಟ್ಟಿಸಿದೆ.

Dhruva Sarja Martin Movie trailer

ಕಂಪ್ಲೀಟ್ ಆಕ್ಷನ್ ಚಿತ್ರವಾಗಿರುವ ಮಾರ್ಟಿನ್, ಅನೌನ್ಸ್ ಆದಾಗಿನಿಂದ ಸಿನಿಪ್ರಿಯರಲ್ಲಿ ವಿಚಿತ್ರ ಕ್ರೇಜ್ ಹುಟ್ಟಿಸಿತ್ತು. ತನ್ನ ವಿಭಿನ್ನ ಡೈಲಾಗ್ ಡೆಲಿವರಿ ಹಾಗೂ ಆಕ್ಷನ್ ಸೀಕ್ವೆಲ್ ಗಳಿಂದ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮೊದಲ ಪಾನ್ ಇಂಡಿಯಾ ಚಿತ್ರ ಇದಾಗಿದ್ದು, ಟ್ರೈಲರ್ ಮೂಲಕ ಬಾಕ್ಸಾಫೀಸ್ ಧೂಳೀಪಟಗೊಳಿಸುವ ಭರವಸೆ ಮೂಡಿಸಿದೆ.

Martin Movie Trailer ಮಾರ್ಟಿನ್ ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ:

ಧ್ರುವ ಸರ್ಜಾಗೆ ನಾಯಕಿಯಾಗಿ ಅನ್ವೇಷಿ ಜೈನ್ ನಟಿಸಿದ್ದರೆ, ಚಿತ್ರತಂಡ ಹಾಲಿವುಡ್ ನಟರನ್ನೂ ಚಿತ್ರದಲ್ಲಿ ಪರಿಚಯಿಸಿದೆ. ಪ್ರಸಿದ್ಧ ಹಾಲಿವುಡ್ ನಟ ನಥನ್ ಜೋನ್ಸ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅವರಲ್ಲದೇ, ವೈಭವಿ ಶಾಂಡಿಲ್ಯಾ, ಅಚ್ಯುತ್ ಕುಮಾರ್, ಆರಾಶ್ ಶಾ, ನಿಖಿತಿನ್ ಧೀರ್, ಜಾರ್ಜಿಯಾ ಆಂಡ್ರಿಯಾನಿ, ಚಿಕ್ಕಣ್ಣ, ಸುಕ್ರತಾ ವಾಗ್ಲೆ ಮುಂತಾದವರು ಈ ಬಹುಕೋಟಿ ವೆಚ್ಚದ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕೆ.ವಿ.ಎನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ, ಎ.ಪಿ.ಅರ್ಜುನ್ ನಿರ್ದೇಶನವಿದೆ. ಉದಯ್ ಕೆ ಮೆಹ್ತಾ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಎಂದರೆ, ಧ್ರುವ ಸರ್ಜಾ ಅವರ ಚಿಕ್ಕಪ್ಪ ಅರ್ಜುನ್ ಸರ್ಜಾ ಅವರೇ ಈ ಚಿತ್ರಕ್ಕೆ ಸ್ಟೋರಿಲೈನ್ ನೀಡಿದ್ದಾರೆ.

 

ಅಕ್ಟೋಬರ್ 11 ಕ್ಕೆ ಈ ಚಿತ್ರ ಜಗತ್ತಿನಾದ್ಯಂತ ತೆರೆಕಾಣಲಿದೆ ಎನ್ನಲಾಗಿದ್ದು, ಈಗಾಗಲೇ ಟ್ರೈಲರ್ ಮೂಲಕ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿದೆ. ಧ್ರುವ ಸರ್ಜಾ ಅವರ ಈ ಬಹುನಿರೀಕ್ಷಿತ ಪಾನ್ ಇಂಡಿಯಾ ಚಿತ್ರ ಸೂಪರ್ ಹಿಟ್ ಆಗಲಿ ಎನ್ನುವುದೇ ಎಲ್ಲರ ಹಾರೈಕೆ.

 

Copyright ©2026 . All Rights Reserved. privacy | terms Whatsapp: 9538193653 Email: hello@flixoye.com