ಚಂದನವನದ ಯುವ ನಟ-ನಟಿ ಮದುವೆ| ಸಾಂಸಾರಿಕ ಜೀವನಕ್ಕೆ ಚೇತನ್ ಸುಷ್ಮಾ

ಚಂದನವನದಲ್ಲಿ ನಟ ನಟಿಯರು ಪ್ರೀತಿಸಿ ಮದ್ವೆಯಾಗಿ ಸಂಸಾರ ನಡೆಸ್ತಿರೋ ಉದಾಹರಣೆಗಳು ಸಾಕಷ್ಟು ಇವೆ. ಅದೇ ರೀತಿ ಇನ್ನೊಂದು ಜೋಡಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಲೋಫರ್ಸ್ , ಪಾಸಿಬಲ್, ಜಿಗರಿದೋಸ್ತ್ ಸಿನೆಮಾಗಳ ನಾಯಕ ನಟ ಚೇತನ್ ಸೂರ್ಯ ಮತ್ತು ಬೆಕ್ಕಿಗೊಂದು ಮೂಗುತಿ, ಭಕ್ತಾದಿಗಳಲ್ಲಿ ವಿನಂತಿ, ರಿಯಲ್ ಎಸ್ಟೇಟ್, ಲೋಫರ್ಸ್, ಜಿಗರಿದೋಸ್ತ್ ಚಿತ್ರಗಳ ನಾಯಕ ನಟಿ ಸುಷ್ಮಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ನಗರದ ಶೆರ್ಟಾನ್ ಹೋಟೆಲ್ ನಲ್ಲಿ ಮದುವೆ ಸಮಾರಂಭ ನಡೆಯಿತು.
ಲೊಫರ್ಸ್ ಮತ್ತು ಜಿಗ್ರಿ ದೋಸ್ತ್ ಸಿನೆಮಾಗಳಲ್ಲಿ ಇಬ್ಬರು ಒಟ್ಟಾಗಿ ನಟಿಸಿದ್ದು, ಪ್ರೀತಿಸಿ ಮದುವೆಯಾಗಿದ್ದಾರೆ. ಸ್ಯಾಂಡಲ್ ವುಡ್ ನ ಯುವ ಪ್ರತಿಭೆಗಳಿಬ್ಬರು ಮದ್ವೆಯಾಗಿರೋದು ಸಂತಸದ ವಿಷಯ. ಅವರ ವೈವಾಹಿಕ ಜೀವನ ಸುಖಮಯವಾಗಿರಲಿ ಎಂಬುದೇ ನಮ್ ಆಶಯ.