ಕನ್ನಡಕ್ಕೆ ರಿಮೇಕ್ ಆಗುತ್ತಿದೆ ಮರಾಠಿ ಸಿನಿಮಾ…

Published on

334 Views

ಕನ್ನಡದಲ್ಲಿ ಬೇರೆ ಭಾಷೆಯ ಸಾಕಷ್ಟು ಹಿಟ್ ಸಿನಿಮಾಗಳು ರಿಮೇಕ್ ಆಗಿವೆ. ಈಗ ಡಬ್ಬಿಂಗ್ ಸಿನಿಮಾಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಮರಾಠಿ ನಟ/ ನಿರ್ದೇಶಕ ಪ್ರವೀಣ್ ತರ್ದೆ ನಟಿಸಿದ 2018 ರಲ್ಲಿ ತೆರೆಕಂಡ ಸೂಪರ್ ಹಿಟ್ ‘ಮುಲ್ಷಿ ಪ್ಯಾಟರ್ನ್’ ಮರಾಠಿ ಸಿನಿಮಾ ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದಾರೆ.

ಇದು ತಮಿಳು, ತೆಲುಗಿನಲ್ಲೂ ಈ‌ ಸಿನಿಮಾ ರಿಮೇಕ್ ಆಗಲಿದ್ದು, ಪ್ರವೀಣ್ ತರ್ದೆ ನಿರ್ದೇಶನ ಮಾಡಲಿದ್ದರಂತೆ. ಚಿತ್ರದಲ್ಲಿ ಒಂದು ಪೋಲಿಸ್ ಅಧಿಕಾರಿಯ ಪಾತ್ರವಿದ್ದು, ಇದು ಬಿಲ್ಡರ್ ಗಳಿಗೆ ಜಾಮೀನುಗಳನ್ನು ಮಾರಾಟ ಮಾಡಿದ ಮೇಲೆ ರೈತರ ಬದುಕಿನಲ್ಲಿ ಉಂಟಾಗುವ ಬದಲಾವಣೆಗಳು, ಅವರ ಕಷ್ಟಗಳನ್ನು ತೋರಿಸುವ ಚಿತ್ರ ಇದಾಗಿದು, ಇದು ರೈತರ ಬದುಕಿನ ಕುರಿತು ಮಾಡಿರುವ ಸಿನಿಮಾವಾಗಿದೆ. ಈ ಸಿನಿಮಾವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಮೆಚ್ಚಿಕೊಂಡಿದ್ದು, ಇದನ್ನು ಹಿಂದಿಯಲ್ಲಿ ರಿಮೇಕ್ ಮಾಡುತ್ತಿದ್ದು, ಹೀರೋ ಆಗಿ ಅವರ ಸಹೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ‘ಅಂತಿಮ್’ ಅಂತ ಹೆಸರು ಇಡಲಾಗಿದ್ದು, ಮಹೇಶ್ ಮಂಜ್ರೇಕರ್ ಇದನ್ನು ನಿರ್ದೇಶನ ಮಾಡುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com