‘ದಾರಿ ತಪ್ಪಿದ ಮಗ’ ಚಿತ್ರಕ್ಕೆ ನಾಯಕಿ ಆಯ್ಕೆ..!!!

Published on

315 Views

ಡಾ.ರಾಜ್ ಕುಮಾರ್ ರವರ ಮೊಮ್ಮಗ ಧಿರೇನ್ ‘ದಾರಿ ತಪ್ಪಿದ ಮಗ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಧಿರೇನ್ ಈಗಾಗಲೇ ಸಿನಿಮಾಕ್ಕೆ ಬೇಕಾಗುವ ಎಲ್ಲ ತರಬೇತಿಯನ್ನು ಪಡೆದು ‘ದಾರಿ ತಪ್ಪಿದ ಮಗ’ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ದಾರಿ ತಪ್ಪಿದ ಮಗ’ ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸುತ್ತಿದ್ದು, ಜಯಣ್ಣ ಕಂಬೈನ್ಸ್ ನಲ್ಲಿ ಚಿತ್ರ ನಿರ್ಮಾಣ ವಾಗುತ್ತಿದೆ.

ಈ ಚಿತ್ರದಲ್ಲಿ ಧಿರೇನ್ ಡಬ್ಬಲ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ಟಗರು ಖ್ಯಾತಿಯ ಮಾನ್ವಿತಾ ಹರೀಶ್ ಪಕ್ಕಾ ಆಗಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಚಿಕ್ಕಣ್ಣ, ಸಾಧುಕೋಕಿಲಾ, ಅವಿನಾಶ್, ಶೋಭರಾಜ್ ನಟಿಸಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com