ಸಾಯಿ ಪಲ್ಲವಿಗೆ ಮನ್ಸೋರೆ ಆಕ್ಷನ್ ಕಟ್ ..!!

Published on

441 Views

ಹರಿವು, ನಾತಿಚರಾಮಿ, ಆಕ್ಟ್ 1978 ಈ ತರಹದ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದಂಥ ಸಿನಿಮಾಗಳನ್ನ ಕೊಟ್ಟ ನಿರ್ದೇಶಕ ಮನ್ಸೋರೆ ಅವರು ಈಗಾಗಲೇ ಅಬ್ಬಕ್ಕ ಸಿನಿಮಾ ಅನೌನ್ಸ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಇವಾಗ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅವರನ್ನ ಕನ್ನಡಕ್ಕೆ ತರುವ ಮಾತುಕತೆ ನಡೆಯುತ್ತಿದ್ದು, ಹಾಗೇನೇ ಒನ್ ಲೈನ್ ಸ್ಟೋರಿ ಸಹ ಹೇಳಿದ್ದಾರೆ ನಿರ್ದೇಶಕ ಮನ್ಸೋರೆ.

ಪೊಲಿಟಿಕಲ್ ಥ್ರಿಲ್ಲರ್ ಜಾನರ್ ಒನ್ ಸ್ಟೋರಿ ಹೇಳಿದ್ದು, ಫುಲ್ ಸ್ಕ್ರಿಪ್ಟ್ ಕೇಳಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಇದೇ ಮೊದಲ ಬಾರಿಗೆ ಸಾಯಿ ಪಲ್ಲವಿ ಕನ್ನಡಕ್ಕೆ ಬರುತ್ತಿದ್ದು, ಸಿನಿಮಾ ಮಂದಿ ಫುಲ್ ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಅಬ್ಬಕ್ಕ ಸಿನಿಮಾ ಸಹ ಶೂಟಿಂಗ್ ಹೋಗಲಿದ್ದಾರೆ. ಮನ್ಸೋರೆ ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಾಂಸಾರಿಕ ಜೀವನಕ್ಕೂ ಮತ್ತು ಮುಂದಿನ ಎಲ್ಲಾ ಯೋಜನೆಗಳಿಗೂ ಶುಭವಾಗಲಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com