ಮಂಗಳವಾರ ರಜಾದಿನ` ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

Published on

482 Views

ತ್ರಿವರ್ಗ ಫಿûಲಂಸ್ ಲಾಂಛನದಲ್ಲಿ ಟೀಮ್ ತ್ರಿವರ್ಗ ನಿರ್ಮಿಸುತ್ತಿರುವ `ಮಂಗಳವಾರ ರಜಾದಿನ` ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ದ್ವಿತೀಯ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಬಿರುಸಿನಿಂದ ಸಾಗಿದೆ.
ಯುವಿನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಯೋಗರಾಜ್ ಭಟ್ ಹಾಗೂ ಗಡ್ದ ವಿಜಿ ಅವರ ಬಳಿ ಸಹ ನಿರ್ದೇಶಕರಾಗಿದ್ದ ಅನುಭವ ಯುವಿನ್ ಅವರಿಗಿದೆ. ಉದಯ್ ಲೀಲಾ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚೋತ್ ಡಿಸೋಜ ಅವರ ಸಂಗೀತ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ, ಚಂದನ್ ಶೆಟ್ಟಿ, ಯೋಗರಾಜ್ ಭಟ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಮಧುಕುಮಾರ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಸುಧೀರ್ ಅವರ ನಿರ್ಮಾಣ ನಿರ್ವಹಣೆಯಿದೆ.

ಹಾಸ್ಯಪ್ರಧಾನ ಈ ಚಿತ್ರದ ನಾಯಕರಾಗಿ ಚಂದನ್ ಆಚಾರ್ ಅಭಿನಯಿಸುತ್ತಿದ್ದು, ಲಾಸ್ಯ ನಾಗರಾಜ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ.
ನಾಯಕ ಚಂದನ್ ಆಚಾರ್ ಚಿತ್ರದಲ್ಲಿ ಕ್ಷೌರಿಕನ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಆತನ ಜೀವನದ ಸುತ್ತ ಕಥೆ ಸಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com