ಶೀಘ್ರದಲ್ಲೇ ‌ತೆರೆಗೆ ಬರಲಿದೆ ‘ಮನೆ ನಂ.67’

Published on

1006 Views

ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ ‘ಮನೆ ನಂ:67’. ಇನ್ನೇನೂ ತೆರೆ ಬರಲು ಸಿದ್ಧವಾಗಿರುವ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಸತ್ಯ ಅಜಿತ್ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ತಯಾರಿಯನ್ನು ಮಾಡಿಕೊಂಡಿರುವ ಸತ್ಯ ಅಜಿತ್ ವೃತ್ತಿ ಯಲ್ಲಿ ಸ್ಟಾಪ್ಟ್ವೇರ್ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿರು ಇವರು ಈಗಾಗಲೇ ಸಿನಿಮಾ , ಸೀರಿಯಲ್ ಗಳಲ್ಲಿ‌ ನಟಿಸಿದ್ದಾರೆ. ಜಯಕುಮಾರ್ ನಿರ್ದೇಶನದ ‘ಮನೆ ನಂ:67’ ಇದೊಂದು‌ ಪಕ್ಕಾ ಹಾರರ್ ಸಿನಿಮಾವಾಗಿದು, ಸಸ್ಪೆನ್ಸ್ , ಥ್ರಿಲ್ಲರ್, ಕಾಮಿಡಿ ಎಲ್ಲವೂ ಚಿತ್ರದಲ್ಲಿದೆ. ಇಂಡಸ್ಟ್ರಿ ಅಲ್ಲಿ ಇಪ್ಪತ್ತು ವರ್ಷ ಅನುಭವವಿರುವ ಸುರೇಶ್ ಬಾಬು ರವರು co ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.

ಕೆಲವರು ಹಾರರ್ ಸಿನಿಮಾವೆಂದಾಗ ಒಂದೇ ರೀತಿಯ‌ ಕಥಾವಸ್ತುವನ್ನಿಟ್ಟುಕೊಂಡು‌ ಸಿನಿಮಾ ಮಾಡುತ್ತಾರೆ. ಅದರೆ ನಾವು ಒಂದು ವಿಭಿನ್ನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಸಿನಿಮಾ ತುಂಬಾ ಡಿಫರೆಂಟಾಗಿ ಮೂಡಿಬಂದಿದೆ ಎನ್ನುತ್ತೆ ಚಿತ್ರತಂಡ. ಚಿತ್ರದ ಚಿತ್ರೀಕರಣವನ್ನು ಆನೇಕಲ್ ನಲ್ಲಿ ಶೇ.80ರಷ್ಟು , ಉಳಿದಂತೆ ಬೆಂಗಳೂರಿನ ಸುತ್ತಮುತ್ತ ಪ್ರದೇಶದಲ್ಲಿ ಚಿತ್ರೀಕರಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ವಸಂತಿ, ಸುಮಿತ್ರ, ಗಾಯತ್ರಿ, ಸ್ವಪ್ನ, ದೊಂಬರ ಕೃಷ್ಣ ಸುರೇಶ್ ಹಾಗೂ ಇತ್ತೀಚಿಗೆ ದುರಂತದಲ್ಲಿ ಸಾವು ಕಂಡ ಜೀವನ್ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸುದೀಪ್ ರವರ ಛಾಯಾಗ್ರಹಣವಿದ್ದು, ಸತೀಶ್ ಕುಮಾರ್ ಸಂಕಲನವಿದೆ. ಸುಮತಿ ಗಣೇಶ್ ನಿರ್ಮಾಣದ ಜವಬ್ದಾರಿ‌ಯನ್ನು ಹೊತ್ತಿದ್ದಾರೆ. ಚಿತ್ರದಲ್ಲಿ ಒಟ್ಟು 2 ಹಾಡುಗಳಿದ್ದು, ಹರ್ಷ ಕಾಗೋಡ್ ಸಂಗೀತ ನೀಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com