ಕೊರೋನಾ‌ ಟೈಂನಲ್ಲಿ ಬಿಂದಾಸ್ ಪೋಟೋ‌ ಶೂಟ್‌ ಮಾಡಿ‌ ಗಮನ‌ ಸೆಳೆದ ನಟಿ ಮಮತಾ ರಾಹುತ್

Published on

403 Views

Mamatha Rahuth South Indian Actress latest stunning Photoshoot

ಕೊರೊನಾ ಅನ್ನೋ ವೈರಸ್‌ ಬಂದು ಜನರ ಜೀವನದ ಜೊತೆ ಆಟವಾಡುತ್ತಿರುವ ಈ‌ ಸಮಯದಲ್ಲಿ ಜನರ ಜೀವನ‌ ವ್ಯವಸ್ಥೆಯೂ ಕೂಡ ಬದಲಾಗಿದೆ.

ಈ ವೈರಸ್‌ ಕೇವಲ ಮನುಷ್ಯನ ಜೀವವನ್ನು ಮಾತ್ರವಲ್ಲದೇ ಜೀವನವನ್ನು ಹಿಂಡುತ್ತಿದೆ. ಈ ಕೊರೋನಾದಿಂದ ಕೆಲಸವಿಲ್ಲದೆ ಎಷ್ಟು ಜನರು‌ ಹಳ್ಳಿ‌ ಸೇರಿದ್ದಾರೆ. ಇನ್ನು ಕೆಲವರು ಖಿನ್ನತೆಗೆ ಒಳಪಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕೊರೊನಾದಿಂದಾಗಿ ಕೆಲ ಉದ್ಯಮಗಳು ಸೇರಿದಂತೆ ಚಿತ್ರೋದ್ಯಮ ಸಂಪೂರ್ಣ ಸ್ತಂಭ್ದವಾಗಿ ಬಿಟ್ಟಿವೆ. ಇವುಗಳನ್ನೇ ನಂಬಿ ಬಾಳ್ತಿದ್ದ ಮಂದಿ ಅಕ್ಷರಶಃ ಬೀದಿಗೆ ಬಂದು ಬಿಟ್ಟಿದ್ದಾರೆ. ಆದ್ರೆ ಎಲ್ಲದಕ್ಕೂ ಆತ್ಮಹತ್ಯೆ ‌ಒಂದೇ ಪರಿಹಾರ ಅಲ್ಲ. ಈ‌ ಕೊರೋನಾದ ಜೊತೆ ನಾವು ಬದುಕಲೇಬೇಕಾಗಿದೆ ಎನ್ನುತ್ತಾರೆ ಇನ್ನು ಕೆಲವರು. ಅದೆ ರೀತಿ
ಇತ್ತೀಚೆಗಷ್ಟೆ ‌ಸಾಕಷ್ಟು ನಟಿಮಣಿಯರು ಈ‌ ಸಮಯದಲ್ಲಿ ಶೂಟಿಂಗ್ ಇಲ್ಲದೆ ಫ್ರೀ ಇರುವುದರಿಂದ ವಿಭಿನ್ನ ಶೈಲಿಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ.
ಅದೇ ರೀತಿ ‘ಪುಣ್ಯಾತ್ ಗಿತ್ತಿ’ ಮಮತಾ ರಾಹುತ್ ರವರ ಕೂಡ ಈಗ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ಹೌದು, “ನಾವು ಕಲಾವಿದರು, ನಟನೆಯೇ ನಮ್ಮ ಬದುಕು. ವೈರಸ್‌ಗೆ ಅಂಜಿ ಅದೆಷ್ಟು ದಿನ ಅಂತಾ ಮನೆಯಲ್ಲಿ ಇರೋಕಾಗುತ್ತೆ. ಇದೇನೂ ನಮ್ಮನ್ನ ಹೆದರಿಸುವಷ್ಟು ದೊಡ್ಡ ಖಾಯಿಲೆಯಲ್ಲ, ಮಾಸ್ಕ್‌, ಸ್ಯಾನಿಟೈಸರ್‌ ಜೊತೆಗೆ ಸಾಮಾಜಿಕ ಅಂತರ ಪಾಲಿಸಿದ್ರೆ, ನಾವೇ ಕೊರೊನಾವನ್ನು ಮಟ್ಟ ಹಾಕ್ಬೊದು” ಅಂತಾ ಹೇಳ್ತಾ, ಜಬರ್ದಸ್ತ್ ಪೋಟೋಶೂಟ್‌ ಮಾಡಿಸಿಕೊಳ್ಳುವ ಮೂಲಕ ದಿಟ್ಟ ಸಂದೇಶವೊಂದನ್ನು ರವಾನಿಸಿದ್ದಾರೆ ಸ್ಯಾಂಡಲ್‌ವುಡ್‌ನ ನಾಯಕ ನಟಿ ಮಮತಾ ರಾಹುತ್.
ಇನ್ನೂ ಸುಮ್ಮನೆ ಮನೆಯೊಳಗೆ ಕೂರುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಸೂಕ್ತ ಭದ್ರತೆಯೊಂದಿಗೆ ಹೊರ ಬನ್ನಿ, ಕೆಲಸದಲ್ಲಿ ತೊಡಗಿಕೊಳ್ಳಿ ಎಂದು ಹೇಳ್ತಿರುವ ಮಮತಾ ರಾಹುತ್‌, ಆಕೆಯ ತಂಡವೊಂದು  ಈ ವಿಭಿನ್ನ ಪ್ರಯತ್ನ ಮಾಡಿದ್ದು ಈಗ ಅದು ಎಲ್ಲರ ಗಮನ ಸೆಳೆಯುತ್ತಿದೆ. 

ಮುದ್ದು ಮುದ್ದಾಗಿ ರೆಡಿಯಾದ ಮಮತಾ ರಾಹುತ್, ಪೋಟೋಗಳಿಗೆ ಮಸ್ತ್‌ ಫೋಸ್‌ ನೀಡುವುದರ ಮೂಲಕ ಪೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಮೂಲಕ  ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡ್ಬೋದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಇನ್ನೂ ಈ ತಂಡದಲ್ಲಿ ನಿರ್ದೇಶಕ ಸಂದೀಪ್‌, ಸಂಕೇತ್‌ ಮತ್ತು ಪೋಟೋಗ್ರಾಫರ್‌ ಪ್ರೀತಮ್‌ ಹಾಗೂ ಸ್ಟೈಲಿಸ್ಟ್‌ ದೀಪ ಅವರಿದ್ದಾರೆ ಅನ್ನೋದು ವಿಶೇಷ. ಅದೇನೇ ಇರ್ಲಿ, ಕೊರೊನಾ ಭಯದಿಂದ ಹೊರಬಂದ ಈ ಸಿನಿಮಾ ಮಂದಿ ಮತ್ತಷ್ಟು ಮಂದಿಗೆ ಧೈರ್ಯ ತುಂಬ್ತಿರೋದು ವಿಶೇಷವಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com