‘ಲುಂಗಿ’ ಚಿತ್ರವನ್ನು ಕರಾವಳಿ ಪ್ರತಿಭೆಗಳು ಸೇರಿ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಸಾಧು ಕೋಕಿಲ, ಶ್ವೇತಾ ಮೋಹನ್, ಸಂಚಿತ್ ಹೆಗ್ಡೆ ಮೊದಲಾದವರು ಈ ಚಿತ್ರದಲ್ಲಿ ಹಾಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ, ಚಿತ್ರಕ್ಕೆ ಶುಭಕೋರಿದರು. ಆನಂದ್ ಆಡಿಯೋ ಮೂಲಕ ಹಾಡುಗಳು ಹೊರ ಬಂದಿದ್ದು, ‘ಲುಂಗಿ’ ಚಿತ್ರದ ವಿತರಣೆಯ ಹಕ್ಕು ಜಯಣ್ಣ ಕಂಬೈನ್ಸ್ ಪಾಲಾಗಿದ್ದು, ರಕ್ಷಿತ್ ಶೆಟ್ಟಿ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಚಿತ್ರ ನಿರ್ಮಾಪಕರಾದ ಮುಖೇಶ್ ಹೆಗ್ಡೆ ಈಗಾಗಲೇ ತುಳು ಭಾಷೆಯಲ್ಲಿ ಎರಡು ಚಿತ್ರಗಳನ್ನು ಮಾಡಿ ಯಶಸ್ವಿಯಾಗಿದ್ದರೆ. ಈಗ ಅವರದೇ ‘ಖಾರ ಎಂಟಟ್ರೈನ್ಮೆಂಟ್’ ಸಂಸ್ಥೆಯ ಮೂಲಕ ನಿರ್ಮಾಣವಾಗಿರುವ ಚಿತ್ರ ‘ಲುಂಗಿ’ ಈ ಚಿತ್ರದಲ್ಲಿ ಮುಖೇಶ್ ಹೆಗ್ಡೆ ಪುತ್ರ ಪ್ರಣವ್ ಹೆಗ್ಡೆ ನಾಯಕರಾಗಿದ್ದು, ನಾಯಕಿಯಾಗಿ ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಕೆ ತೂಮಿನಾಡು, ವಿಜೆ ವಿನೀತ್, ದೀಪಕ್ ರೈ, ಕಾರ್ತಿಕ್ ವರದರಾಜು, ರೂಪ ವರ್ಕಾಡಿ ಮುಂತಾದವರ ತಾರಾಗಣವಿದೆ. ‘ಲುಂಗಿ’ ಚಿತ್ರವೂ ಮಂಗಳೂರಿನ ಸೊಗಡಿನಲ್ಲಿ ನಡೆಯುವ ಕಥೆಯಾಗಿದ್ದು, ಹಾಸ್ಯದ ಜೊತೆಗೆ ಯುವಜನತೆಗೆ ಉತ್ತಮ ಸಂದೇಶವನ್ನು ನೀಡುತ್ತದೆ. ಚಿತ್ರ ಅಕ್ಟೋಬರ್ 11 ರಂದು ತೆರೆಗೆ ಬರಲಿದೆ.