ಪ್ರೇಕ್ಷಕರನ್ನು ಸೆಳೆಯುವ ‘ಲವ್ ಯು‌ ಟು’

Published on

462 Views

ಹೊಸಬರೇ ಸೇರಿ ಮಾಡಿರುವ ‘ಲವ್ ಯು ಟು’ ಚಿತ್ರದ ಚಿತ್ರೀಕರಣ ‌ಮುಗಿಸಿ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಹಾಡುಗಳಿಂದ ಸುದ್ದಿ ಮಾಡಿರುವ ‘ ಲವ್ ಯು ಟು’ ಚಿತ್ರ ತಂಡ ಪ್ರೇಕ್ಷಕರನ್ನು ತಮ್ಮ ಸಿನಿಮಾದತ್ತ ಸೆಳೆಯುವ ಪ್ರಯತ್ನ‌ ಮಾಡಲು ಹೊಸ ತಂತ್ರವೊಂದನ್ನು ರೂಪಿಸಿದೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಚಿತ್ರದ ಫಸ್ಟ್ ಹಾಫ್ ಬಳಿಕ ಸಿನಿಮಾ ಕಥೆ ಮುಂದೇನಾಗುತ್ತದೆ ಎಂದು ‘ಲವ್ ಯು ಟು’ ಸಿನಿಮಾ ಪೇಜ್ ಗೆ ಪೋಸ್ಟ್ ಮಾಡಬೇಕು.

ವೀಕ್ಷಕರ ಊಹೆ 90ರಷ್ಟು ಸರಿಯಾಗಿದ್ದರೆ ಟಿಕೆಟ್ ದರ ಹಾಗೂ ಅಲ್ಲಿ ತೆಗೆದುಕೊಂಡು ಸ್ನ್ಯಾಕ್ಸ್ ದರವನ್ನು ಚಿತ್ರತಂಡವೇ ವಾಪಸ್ಸು ನೀಡುತ್ತಂತೆ. ಪವನ್ ಕುಮಾರ್ ಮತ್ತು ರಘಭಟ್ ನಾಯಕರಾಗಿ ನಟಿಸುತ್ತಿರುವ ‘ಲವ್‌ ಯು ಟು’ ಚಿತ್ರ ಪ್ರೇಕ್ಷಕರನ್ನು ಸೆಳೆಯಲು‌ ಹೊಸ ಪ್ರಯೋಗವನ್ನು ಮಾಡಿದೆ. ಬಿ.ಕೆ ಮಹೇಶ್ ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ನಾಯಕ ಪವನ್ ಕುಮಾರ್ ರವರೇ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಕೀರ್ತಿ ಲಕ್ಷ್ಮೀ ನಾಯಕಿ ಅಭಿನಯಿಸಿದ್ದಾರೆ. ಜುಲೈ 13 ರಂದು ಸಿನಿಮಾ ತೆರೆಗೆ ಬರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com