ಹಸೆಮಣೆ ಏರಲು ರೆಡಿಯಾಗಿದ್ದಾರೆ ಲವ್ ಮಾಕ್ಟೈಲ್ ಜೋಡಿ…

Published on

338 Views

ಲವ್ ಮಾಕ್ಟೇಲ್ ನ‌ ಲವ್ ಬರ್ಡ್ಸ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ‌ ನಾಗರಾಜ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಲವ್ ಮಾಕ್ಟೈಲ್ ಸಿನಿಮಾ ಬಿಡುಗಡೆಯಾಗಿ‌ ಭರ್ಜರಿ ಯಶಸ್ಸು ಕಂಡು ಆದಿ ಮತ್ತು ನಿಧಿಯ ಜೋಡಿಯ ಮೋಡಿಯನ್ನು ಪ್ರೇಕ್ಷಕರು ‌ಮೆಚ್ಚಿದ್ದರು.

ಈಗ ಡಾರ್ಲಿಂಗ್ ಕೃಷ್ಣ ಮಾಕ್ಟೈಲ್ 2 ಚಿತ್ರದಲ್ಲಿ ಬಿಜಿಯಾಗಿದ್ದು, ಮಿಲನ ನಾಗಾರಾಜ್ ಕೂಡ ತಮ್ಮ ಹೊಸ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇಬ್ಬರು ತಮ್ಮ ತಮ್ಮ‌ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಅದರ ನಡುವೆ ಫೆಬ್ರವರಿ 14 ರಂದು ತಾವು ಹೊಸ ಜೀವನಕ್ಕೆ ಕಾಲಿಡುವುದನ್ನು ಸಾಮಾಜಿಕ ‌ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮಿಲನ ನಾಗರಾಜ್. ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಈ ಜೋಡಿಗೆ ಶುಭ ಹಾರೈಸೋಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com