ಬಹುನಿರೀಕ್ಷೆಯ ಕಲಿವೀರ ಇದೇ ಆಗಸ್ಟ್ 6ಕ್ಕೆ ರಿಲೀಸ್ .
ಕರೋನ ಎರಡನೇ ಅಲೆಯ ನಂತರ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಸಿನಿಮಾ ಕಲಿವೀರ. ಲಾಸ್ಟ್ ಟೈಮ್ ಆಕ್ಟ್ 1978 ಮೊದಲ ಸಿನಿಮಾವಾಗಿ ಬಿಡುಗಡೆಯಾಗಿ ಗೆದ್ದು ಬೀಗಿತ್ತು. ಅದೇ ರೀತಿ ಈ ಸಿನೆಮಾ ಸಹ ಗೆದ್ದು, ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಎಳೆದು ತರಲಿ ಎಂಬುದು ಚಿತ್ರೋದ್ಯಮ ಮತ್ತು ಸಿನಿ ಪ್ರೇಕ್ಷಕರ ಮನದಾಸೆ.
ಕನ್ನಡ ದೇಶದೊಳ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅವಿರಾಮ್ ಕಂಠೀರವ ( ಅವಿ ) ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಏಕಲವ್ಯ ಎಂಬ ಉತ್ತರ ಕರ್ನಾಟಕ ಭಾಗದ ಹುಡುಗ ಈ ದೊಡ್ದ ಮಟ್ಟದ ಸಿನೆಮಾದಲ್ಲಿ ಹೀರೊ ಆಗಿ ಅಭಿನಯಿಸಿದ್ದು, ಸ್ಟಂಟ್ ಡ್ಯಾನ್ಸ್ ಆಕ್ಟಿಂಗ್ ಮೂಲಕ ಎಲ್ಲರ ಬೆರಗುಗೊಳಿಸಿದ್ದಾನೆ. ಟೀಸರ್ ನಲ್ಲಿ ಮಾಡಿರೋ ಆಕ್ಷನ್ ಸ್ಟಂಟ್ ಗೆ ಸಿನಿಮಾ ಮಂದಿ ಫಿದಾ ಆಗವ್ರೆ.
ಇದೇ ಆಗಸ್ಟ್ 6 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಕಲಿವೀರ ಸಿನೆಮಾ ಮೇಲೆ ಎಲ್ಲರ ಗಮನ ಬಿದ್ದಿದೆ. ದೌರ್ಜನ್ಯವನ್ನು ಸೇಡು ದ್ವಂಸ ಮಾಡುವ ಕಥೆ ಇದಾಗಿದ್ದು, ತನ್ನ ಜನಾಂಗ ರಕ್ಷಿಸುವ ನಾಯಕ ಅಂತ ಟೀಸರ್ ನಲ್ಲಿ ಗೊತ್ತಾಗಬಹುದು. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಪಾವನ ಗೌಡ ಮತ್ತು ಚಿರಶ್ರೀ ಅಂಚನ್ ಅವರು ಅಭಿನಯಿಸಿದ್ದಾರೆ. ಹಾಗೇನೇ ನಾಯಕಿಯರ ಜೊತೆ ಅನಿತಾ ಭಟ್ ಸಹ ಖಡಕ್ ಡಾನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಬಲ ನಾಣಿ ಪಾತ್ರ ಇಡೀ ಸಿನೆಮಾ ಜರ್ನಿ ಮಾಡುತ್ತದೆ ಎನ್ನುತ್ತಾರೆ ನಿರ್ದೇಶಕ ಅವಿ.
ಕಲಿವೀರ ಚಿತ್ರಕ್ಕೆ ವಿ ಮನೋಹರ್ ಸಂಗೀತ ನೀಡಿದ್ದು, ಎಮ್ ಪಿ ಶ್ರೀನಿವಾಸ್ ಪವಾರ್, ರಾಜು ಪೂಜಾರ್, ಪಿ ಕೆ ಹನುಮಂತಪ್ಪ ಸಿನೆಮಾಕ್ಕೆ ಬಂಡವಾಳ ಹೂಡಿದ್ದಾರೆ. ಹಾಲೇಶ್ ಕ್ಯಾಮೆರ ಕೈಚಳ ತೋರಿದ್ದು, ಎ ಆರ್ ಕೃಷ್ಣ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಅಂದುಕೊಂದಂತೆ ಎಲ್ಲಾ ಶುಭವಾಗಲಿ ಇಡೀ ತಂಡಕ್ಕೆ.