ಸ್ಯಾಂಡಲ್’ವುಡ್’ನಲ್ಲಿ ಇಂದು ತೆರೆಗೆ ಬರುತ್ತಿರುವ 5 ಚಿತ್ರಗಳ ಪುಲ್ ಡಿಟೇಲ್ಸ್ ಇಲ್ಲಿದೆ ನೋಡಿ
ಸ್ಯಾಂಡಲ್’ವುಡ್’ನಲ್ಲಿ ಇಂದು ತೆರೆಗೆ ಬರುತ್ತಿರುವ 5 ಚಿತ್ರಗಳ ಪುಲ್ ಡಿಟೇಲ್ಸ್ ಇಲ್ಲಿದೆ ನೋಡಿ
ಕನ್ನಡ ಚಿತ್ರರಂಗ ಚಲನಚಿತ್ರಗಳನ್ನು ತಯಾರಿಸುವ ಕಾರ್ಖಾನೆ ಎಂದರೆ ತಪ್ಪಾಗಲಾರದು. ಕಾರಣ ಪ್ರತಿ ವರ್ಷ ಸರಿ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳು ರಾಜ್ಯದಲ್ಲಿ ತೆರೆಗೆ ಬರುತ್ತಿವೆ. ಭಾರತದಲ್ಲೇ ಅತಿ ಹೆಚ್ಚು ಚಲನಚಿತ್ರಗಳು ಬಿಡುಗಡೆಗೊಳ್ಳುತ್ತಿರುವ ರಾಜ್ಯ ಕರ್ನಾಟಕ. ಸ್ಯಾಂಡಲ್ ವುಡ್ ನಲ್ಲಿ ಈ ವಾರ ಕೂಡ 5 ಚಿತ್ರಗಳು ಪ್ರೇಕ್ಷಕರ ತೀರ್ಪಿಗಾಗಿ ಸಿನಿಮಾ ಮಂದಿರಗಳಲ್ಲಿ ಸ್ಥಳ ನಿಗದಿಯಾಗಿದೆ.
ಬಿಡುಗಡೆಯಾಗುತ್ತಿರುವ 5 ಚಿತ್ರಗಳ್ಯಾವುವು..?
ಇವುಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ತಿಳಿಯೋಣ.
1. ನಂಜುಂಡಿ ಕಲ್ಯಾಣ : ನಂಜುಂಡಿ ಕಲ್ಯಾಣ ಎಂದರೆ ನೆನಪಾಗುವುದು 80ರ ದಶಕದ ರಾಘವೇಂದ್ರ ರಾಜಕುಮಾರ್ ಹಾಗೂ ಮಾಲಾಶ್ರಿ ನಟನೆಯ ಇದೇ ಹೆಸರಿನ ಚಿತ್ರ. ಒಂದು ವರ್ಷ ಪ್ರದರ್ಶನ ಕಂಡು, ದಾಖಲೆ ಬರೆದ ಚಿತ್ರ. ಈಗ ತೆರೆಗೆ ಬರುತ್ತಿರುವ ನಂಜುಂಡಿ ಕಲ್ಯಾಣ ಈ ಹಿಂದೆ ಮಡಮಕ್ಕಿ ಎಂಬ ಚಿತ್ರ ನಿರ್ಮಿಸಿದ್ದ, ಶ್ರೀರಾಮ್ ಟಾಕೀಸ್ ಬ್ಯಾನರ್ ನಲ್ಲಿ ಹೊಸ ಚಿತ್ರ ನಿರ್ಮಾಣವಾಗಿದೆ, ನಿರ್ದೇಶಕರಾಗಿ ರಾಜೇಂದ್ರ ಕಾರಂತ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇನ್ನೂ ನಾಯಕನಟನಾಗಿ ತನುಷ್, ನಾಯಕಿಯಾಗಿ ರೋಜ್ ಚಲುವೆ ಶ್ರಾವ್ಯ ಅಭಿನಯಿಸಿದ್ದಾರೆ. ಕುರಿ ಪ್ರತಾಪ್, ರಾಜೇಂದ್ರ ಕಾರಂತ್, ಪದ್ಮಜಾರಾವ್ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆ ಎಂ ಪ್ರಕಾಶ್ ಅವರ ಸಂಕಲನ, ಅನೂಪ್ ಸಿಳೀನ್ ಅವರ ಸಂಗೀತ, ಮಂಜುನಾಥ್ ನಾಯಕ್ ಅವರ ಛಾಯಗ್ರಹಣ ಚಿತ್ರಕ್ಕಿದ್ದು, ನಾಯಕ ತನುಶ್ ಸೇಹಿತ ಸುಪ್ರೀತ್ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
2.ಜಯಮಹಲ್ : ಇದೊಂದು ಹಾರಾರ್ ಚಿತ್ರ. ಸಾಹಿತಿ ಹೃದಯ ಶಿವ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕಿ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ನಾಯಕ ನಟನಾಗಿ ನೀನಾಸಂ ಅಶ್ವಥ್, ನಾಯಕಿಯಾಗಿ ಶುಭಪೂಂಜಾ ಅಭಿನಯಿಸಿದ್ದಾರೆ. ಹಿರಿಯ ನಟಿ ಕೌಸಲ್ಯ, ಕರಿಸುಬ್ಬು, ಬಸುಕುಮಾರ್ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೇಣು ಕುಮಾರ್ ಅವರು ನಿರ್ಮಾಪಕರಾಗಿದ್ದು, ನಾಗಾರ್ಜುನ ಛಾಯಾಗ್ರಾಹಕರಾಗಿದ್ದಾರೆ.
3.ಹುಚ್ಚ-2 : 17 ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅಭಿಸಯದ ಹುಚ್ಚ ಚಿತ್ರ ಅದ್ಬುತ ದಾಖಲೆಯನ್ನೇ ಬರೆದಿತ್ತು. ಈಗ ಇದೇ ಹೆಸರಿನ ಮತ್ತೊಂದು ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿದ್ದು, ಮದರಂಗಿ ಕೃಷ್ಣ ಅಭಿನಯಿಸಿದ್ದಾರೆ. ನಾಯಕನ ತಾಯಿಯ ಪ್ರಾತ್ರದಲ್ಲಿ ಮಾಳವೀಕ ಅವಿನಾಶ್ ಕಾಣಿಸಿಕೊಂಡಿದ್ದಾರೆ.
4.ಮದುವೆಯ ದಿಬ್ಬಣ : ಬಿಎನ’ಆರ್ ಫಿಲಂಸ್ ಲಾಛಂನದಲ್ಲಿ ಬಾ.ನಾ ರವಿ ಎಂಬುವರು ನಿರ್ಮಿಸಿದ್ದು, ಎಸ್ ಉಮೇಶ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಎ.ಟಿ ರವೀಶ್ ಚಿತ್ರದ 3 ಹಾಡುಗಳಿಗೆ ಸಂಗಿತ ನೀಡಿದ್ದಾರೆ. ಸ್ಟಾರ್ ನಾಗಿ ಕೊರಿಯಾಗ್ರಾಫ್ ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ರವಿಕಿರಣ್ ಕಾಣಿಸಿಕೊಂಡಿದ್ದು, ಕಾಮಿಡಿ ಕಿಲಾಡಿ ಸ್ಟಾರ್ ಶಿವರಾಜ್ ಕೆ.ಆರ್ ಪೇಟೆ, ಅಭಿಷೇಕ್, ಸೋನಾಲ್, ಚಂದ್ರಕಲಾ ಮೋಹನ್, ಆಲಿಶಾ, ಕಾವ್ಯ, ಮಾಸ್ಟರ್ ಭೂಷಣ್, ಬೇಬಿ ಅಶ್ವಿನಿ ಈ ಚಿತ್ರದಲ್ಲಿ ನಟಿಸಿದ್ದಾರೆ.
5. ವರ್ತಮಾನ : ಅಲ್ಟಿಮೆಟ್ ಮೂವಿಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ವರ್ತಮಾನ ಚಿತ್ರಕ್ಕೆ ಮನು ಬಿಲ್ಲೆಮನೆ ಮತ್ತು ಹೆಮಾವತಿ ಟಿ ಸಿ ನಿರ್ಮಾಪಕರಾಗಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ಉಮೇಶ್ ಅಂಶಿ ಬರೆದು, ನಿರ್ದೇಶಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಸಂಜನಾ ಪ್ರಕಾಶ್, ವಾಣಿಶ್ರೀ, ಸ್ವಪ್ನರಾಜ್, ದೀಪಕ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಗೋವಿಂದರಾಜು ಅವರ ಛಾಯಾಗ್ರಹಣವಿದ್ದು, ಸರವಣ ಸಂಗೀತ ನೀಡಿದ್ದಾರೆ.
ಇಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ 5 ಚಿತ್ರಗಳ ಪೈಕಿ ಪ್ರೇಕ್ಷಕ ಮಹಾ ಪ್ರಭು ಯಾವ ಚಿತ್ರವನ್ನು ಮೆಚ್ಚಿ ದಡ ಸೇರಿಸುತ್ತಾನೋ ಕಾದು ನೋಡಬೇಕಷ್ಟೇ.