ನಾನ್ ಯೂನಿಯನ್ ಸಹ ಮತ್ತು ಸಹಾಯಕ ನಿರ್ದೇಶಕರಿಗೆ ಕಿಟ್ ವಿತರಿಸಿದ ಲಿಂಗರಾಜ್ ಇತಿಹಾಸ

Published on

433 Views

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯೂನಿಯನ್ ಗಳು ಇದ್ದು, ಈ ಟೈಮ್ ನಲ್ಲಿ ಎಲ್ಲಾ ಯೂನಿಯನ್ ಸದಸ್ಯರಿಗೆ ಕಿಟ್ ಅಥವಾ ಅರ್ಥಿಕವಾಗಿ ಒಂದಿಷ್ಟು ಸಹಾಯವಾಗುತ್ತೆ. ಆದರೆ ಯಾವುದೇ ಯೂನಿಯನ್ ಸೇರದೇ ಸಾಕಷ್ಟು ದಿನಗಳ ಕಾಲ ಚಿತ್ರರಂಗದಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲ್ಸ ಮಾಡ್ತಿರೋರಿಗೆ ಯಾರು ನೋಡಿರಲಿಲ್ಲ.

ಇವಾಗ ಅಂತಹ ಯೂನಿಯನ್ ಸೇರದ ಸಹ ಮತ್ತು ಸಹಾಯಕ ನಿರ್ದೇಶಕರಿಗೆ ಬೆಂಬಲಕ್ಕೆ ನಿಂತಿದ್ದಾರೆ ಖ್ಯಾತ ನಿರ್ದೇಶಕ ಪಿ ವಾಸು ಅವರ ಸಹ ನಿರ್ದೇಶಕ ಲಿಂಗರಾಜು ಇತಿಹಾಸ.

ಬಹಳಷ್ಟು ಮಂದಿ ಯೂನಿಯನ್ ಸದಸ್ಯರಿಗೆ ಸಹಾಯ ಮಾಡುತ್ತಿದ್ದಾರೆ ಹೊರತು, ಈ ತರ ಯಾವುದೇ ಯೂನಿಯನ್ ಸೇರದ ಪ್ರತಿಭೆಗಳಿಗೆ ಮಾಡಿರಲಿಲ್ಲ. ಅವರನ್ನು ಗುರುತಿಸಿ ಅವರಿಗೆ ಕಿಟ್ ವಿತರಣೆ ಮಾಡುವ ಮೂಲಕ ಸಹಾಯಕ್ಕೆ ನಿಂತಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಸಹ ಮತ್ತು ಸಹಾಯಕ ನಿರ್ದೇಶಕರಿಗೆ ಕಿಟ್ ವಿತರಿಸಿದ್ದಾರೆ.

ಇನ್ನೂ ಸಾಕಷ್ಟು ಜನರಿಗೆ ಕ್ಲಾಪ್ ಇನ್ ಕನ್ನಡ ಯೂಟ್ಯೂಬ್ ಚಾನೆಲ್ ವತಿಯಿಂದ ಕಿಟ್ ನೀಡುವ ಕಾಯಕಕ್ಕೆ ಮುಂದಾಗುತ್ತಿದ್ದಾರೆ. ತಾವು ಸಹ ನಿರ್ದೇಶಕನಾಗಿ ಆ ವಿಭಾಗದ ಪ್ರತಿಭೆಗಳಿಗೆ ಸಹಾಯ ಮಾಡ್ತಿರೋದು ಸಂತಸದ ವಿಷಯ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com