‘ಲೈಫ್ ಜೊತೆ ಒಂದು ಸೆಲ್ಫೀ’ ಟ್ರೈಲರ್ ಮತ್ತು ಆಡಿಯೋ ರಿಲೀಸ್

Published on

278 Views

‘ಲೈಫ್ ಜೊತೆ ಒಂದು ಸೆಲ್ಫೀ’ ಟ್ರೈಲರ್ ಮತ್ತು ಆಡಿಯೋ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಾರಥಿ ಎಂಬ ಚಿತ್ರದ ಮೂಲಕ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದ್ದವರು ತೂಗುದೀಪ ದಿನಕರ್. ಆನಂತರ ಡೈರೆಕ್ಷನ್ ಕೆಲಸದಿಂದ ಸ್ವಲ್ಪ ವಿರಾಮ ಪಡೆದಿದ್ದ ದಿನಕರ್ ಚಕ್ರವರ್ತಿ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಡೈರೆಕ್ಟಾರ್ ಕ್ಯಾಪ್ ಹಾಕಿಕೊಂಡು ‘ಲೈಫ್ ಜೊತೆ ಒಂದು ಸೆಲ್ಫಿ’ ಆಕ್ಷನ್ ಕಟ್ ಹೇಳಿದ್ದಾರೆ, ಸದ್ಯ ಈ ಚಿತ್ರದ ಟ್ರೈಲರ್ ಮತ್ತು ಆಡಿಯೋ ರಿಲೀಸ್ ಆಗಿದ್ದು ಚಿತ್ರದ ಬಗ್ಗೆ ಭರವಸೆ ಮೂಡಿಸಿವೆ.
ದಿನಕರ್ ಸೈಲೆಂಟಾಗಿ ‘ಲೈಫ್ ಜೊತೆ ಒಂದು ಸೆಲ್ಫೀ’ ಸಿನಿಮಾ ಮಾಡಿ ಮುಗಿಸಿದ್ದಾರೆ. . ಮೊನ್ನೆ ದಿನ ‘ಲೈಫ್ ಜೊತೆ ಒಂದು ಸೆಲ್ಫೀ’ ಚಿತ್ರದ ಹಾಡುಗಳನ್ನು ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ಒಟ್ಟಾಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸಮೃದ್ಧಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಇನ್ನೇನು ಸಿನಿಮಾ ತೆರೆಗೆ ಬರಲಿದೆ. ಅಂದಹಾಗೆ, ಈ ಸಿನಿಮಾಗೆ ದಿನಕರ್ ಅವರ ಪತ್ನಿ ಮಾನಸಾ ದಿನಕರ್ ಕಥೆ ಬರೆದಿದ್ದಾರೆ.

ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರ ಯುವಕರ ಮನಸ್ಸಿಗೆ ಹತ್ತಿರಾಗುವ ಕಥೆ ಹೊಂದಿದೆಯಂತೆ. ಸಾಧು ಕೋಕಿಲಾ ಮಾಮೂಲಿ ಪಾತ್ರಕ್ಕಿಂತಾ ಭಿನ್ನವಾಗಿ ಕಾಣಿಸಿಕೊಂಡಿದ್ದಾರಂತೆ. ಚೆಂದದ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿರೋದರಿಂದ ಲೈಫ್ ಜೊತೆ ಒಂದ್ ಸೆಲ್ಫಿ ಬಗೆಗಿನ ಕುತೂಹಲದ ಕಾವು ಹೆಚ್ಚಾಗಲಿರೋದಂತೂ ಸತ್ಯ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com