‘ನನ್ನನ್ನು ಬದುಕಲು ಬಿಡಿ’ – ಸಂಗೀತಾ ಭಟ್

Published on

430 Views

ಮೀಟೂ ಅಭಿಯಾನದಲ್ಲಿ ತಮ್ಮ ಅನುಭವವನ್ನು, ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಹಂಚಿಕೊಂಡಿದ್ದ ನಟಿ ಸಂಗೀತಾ ಭಟ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ಸಾಮಾಜಿಕ ಜಾಲತಾಣದಲ್ಲಿ ಚಿತ್ರರಂಗದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದರು. ಸಂಗೀತಾ ರವರ ಪೋಸ್ಟ್ ಈಗ ಬೇರೆ ಬೇರೆ ಬಣ್ಣಗಳನ್ನು ಪಡೆದುಕೊಂಡಿದ್ದೆ.

” 15 ದಿನದ ಹಿಂದೆ ನಾನು ನನ್ನ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದೆ. ಇದು ಯಾವುದೇ ಪಬ್ಲಿಸಿಟಿಗಾಗಿ ಮಾಡಲಿಲ್ಲ. ಅದರಲ್ಲಿ ಯಾವ ನಟ, ನಿರ್ದೇಶಕ, ನಿರ್ಮಾಪಕನ ಬಗ್ಗೆಯೂ ಆರೋಪ ಮಾಡಿಲ್ಲ. ಆದರೆ ನನ್ನ ಪೋಸ್ಟ್ ಗಳನ್ನು ಇಟ್ಟುಕೊಂಡು ಕೆಲವರು ತಮಗೆ ಬೇಕಾದ ರೀತಿಯಲ್ಲಿ , ಕೆಲವೊಂದು ಹೆಸರುಗಳನ್ನು ಊಹಿಸಲು ಶುರುಮಾಡಿದ್ದಾರೆ. ನಾನು ಯಾರ ಹೆಸರು ಕೆಡಿಸಬೇಕು ಎನ್ನುವ ಉದ್ದೇಶಕ್ಕೆ ಆ ಪೋಸ್ಟ್ ಹಾಕಿಲ್ಲ. ನಾನು ಇನ್ಸ್ಟಾಗ್ರಾಮ್ ನಲ್ಲಿ ಪೋಟೋ ಹಾಕಿದರೆ ಸಾಕಷ್ಟು ಅಶ್ಲೀಲ ಕಾಮೆಂಟ್ಸ್ ಗಳು ಬರುತ್ತಿವೆ. ನಾನು ಯಾರಿಗೂ ಹಾನಿ ಆಗುವ ದೃಷ್ಟಿಯಿಂದ ಆ ಪೋಸ್ಟ್ ಹಾಕಿಲ್ಲ. ಇದರಿಂದ ಯಾರಿಗೂ ತೊಂದರೆಯೂ ಆಗಿಲ್ಲ.ನಾನು ಕಳೆದ ಒಂದು ವರ್ಷದಿಂದ ಚಿತ್ರರಂಗದಲ್ಲಿ ಇಲ್ಲ. ನನಗೆ ಈಗ ಕೆಟ್ಟ ಕೆಟ್ಟ ಸಂದೇಶಗಳು ಬರುತ್ತಿವೆ.ಇದರಿಂದ ತುಂಬಾ ನೋವಾಗಿದೆ. ನಾನು ಸಾಮಾನ್ಯ ವ್ಯಕ್ತಿಯಾಗಿ ಬದುಕಲು ಆಸೆ ಪಡುತ್ತೇನೆ. ನನ್ನನ್ನು ಬದುಕಲು ಬಿಡಿ” ಎಂದು ತಮ್ಮ ನೋವನ್ನು ಸಾಮಾಜಿಕ ‌ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com