ಖುಷಿಯ ಸಾರ ಹೇಳಿದ ಸಂಜನಾ ಪ್ರಕಾಶ್/ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗೊಂಡ ಖುಷಿ

Published on

502 Views

ನಟಿ ಸಂಜನಾ ಪ್ರಕಾಶ್ ಇದೀಗ ಸೋಷಿಯಲ್ ಮೀಡಿಯಾ ಟ್ರೆಂಡಿಗ್ನಲ್ಲಿದ್ದಾರೆ. ತಾವೇ ಮೊದಲ ಬಾರಿಗೆ ನಟಿಸಿ, ನಿದೇರ್ಶನ ಮಾಡಿರುವ ‘ಖುಷಿ’ ಎಂಬ ವೀಡಿಯೋ ಆಲ್ಬಮ್ ಹಾಡಿಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕನ್ನಡದ ಹಾಗೂ ಹಿಂದಿ ಎರಡು ಭಾಷೆಯಲ್ಲಿಯೂ ಮೂಡಿಬಂದಿರುವ ಈ ಹಾಡು ಖುಷಿ ಎಂಬುದು ನಮ್ಮೊಳಗೆ ಇದೆ. ಅದನ್ನು ಹುಡುಕಿಕೊಂಡು ಹೋಗುವ ಸಾರವಿಲ್ಲ ಎಂಬ ಅಂಶವನ್ನು ಸಾರಿ ಹೇಳುತ್ತದೆ.
ಸಂಜನಾ ಹೇಳುವಂತೆ, ಸದಾ ಸಂತೋಷದಿಂದ ಇರುವ ನನ್ನ ಹ್ಯಾಪಿನೆಸ್ ಬಗ್ಗೆ ಎಲ್ಲರೂ ಕುತೂಹಲತೆಯನ್ನು ಹೊಂದಿದಾಗ, ಖುಷಿಯ ಕುರಿತು ಹಾಡಿನ ಮೂಲಕ ಕೆಲವೇ ಕ್ಷಣದಲ್ಲಿ ಜನರಿಗೆ ಹೇಳಬೇಕೆನಿಸಿತು. ಅದಕ್ಕಾಗಿಯೇ ನಾನೇ ನಿರ್ದೇಶನ ಮಾಡಿ, ನಟಿಸಿದೆ ಎಂದಿದ್ದಾರೆ.
ಹಾಡಿನಲ್ಲಿ ನನ್ನ ಜತೆ ಇನಮ್ ಕಾಣಿಸಿಕೊಂಡಿದ್ದೂ, ಅದರ ಜತೆಗೆ ನನ್ನ ತಂಗಿಯೂ ಅಭಿನಯಿಸಿದ್ದಾರೆ.

ಮುಲ್ಕಿ ಬೀಚ್, ಬೆಂಗಳೂರಿನ ಬ್ರಿಗೇಡ್ , ಎಂಜಿ ರಸ್ತೆ ಸುತ್ತಮುತ್ತ ಸೇರಿದಂತೆ ನಾಲ್ಕು ದಿನ ಶೂಟಿಂಗ್ ಮಾಡಿದರಂತೆ. ಈ ಹಾಡಿಗೆ ಕನ್ನಡದಲ್ಲಿ ಪ್ರಶಾಂತ್, ಹಿಂದಿಯಲ್ಲಿ ಪವನ್ ಉಪಾಧ್ಯಾಯ ಸಾಹಿತ್ಯ ಬರೆದಿದ್ದೂ, ಇದಕ್ಕೆ ಸ್ಟೀಫನ್ ಪ್ರತೀಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಎನ್ಕೆಎಂ ಬಂಡವಾಳ ಹೂಡಿದ್ದಾರೆ.
ಈಗಾಗಲೇ ಟ 10,000ಕ್ಕೂ ಅಧಿಕ ಜನರು ವೀಕ್ಷಣೆ ಮಾಡಿರುವುದರಿಂದ ಇಡೀ ತಂಡವೂ ಖುಷಿಯಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com