110% ನಿಮ್ಮನ್ನೆಲ್ಲ ನಗಿಸಲಿ ಸದ್ಯದಲ್ಲೇ ಬರುತ್ತಿದ್ದಾರೆ “ಕುಂಟ ಕೋಣ ಮೂಕ ಜಾಣ”

Published on

504 Views

ಕರ್ನಾಟಕದಾದ್ಯಂತ 14ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡು ಜನಮೆಚ್ಚುಗೆ
ಪಡೆದಿರುವ ಉತ್ತರ ಕರ್ನಾಟಕದ ಜನಪ್ರಿಯ ಹಾಸ್ಯ ನಾಟಕ “ಕುಂಟಕೋಣ ಮೂಕಜಾಣ” ಸಿನಿಮಾ ರೂಪದಲ್ಲಿ ಸದ್ಯದಲ್ಲೇ ತೆರೆಗೆ ಬರಲಿದೆ.‌

ನೋಡುಗರಿಗೆ 110% ಹಾಸ್ಯದ ರಸದೌತಣ ನೀಡುವ ಈ ಹಾಸ್ಯ ಕಥೆಯ
ಆಯ್ದಭಾಗ ಇತ್ತೀಚೆಗೆ Zಕನ್ನಡ ವಾಹಿನಿಯ ಜನಪ್ರಿಯ” ಕಾಮಿಡಿ ಕಿಲಾಡಿಗಳು” ನಲ್ಲೂ ಪ್ರದರ್ಶನ ಕಂಡಿತ್ತು. ಈಗ ಹಿರಿತೆರೆಯಲ್ಲೂ ಪ್ರೇಕ್ಷಕರನ್ನು ಮೋಡಿ ಮಾಡಲು ಅತೀ ಶೀಘ್ರದಲ್ಲೇ ಬರಲಿದ್ದಾರೆ. ನೈನ್ ಸ್ಟಾರ್ ಏಂಜಲ್ಸ್ ಮೂವೀಸ್ ಬ್ಯಾನರ್ ಅಡಿಯಲ್ಲಿ ವೈಭವ್ ಬಸವರಾಜ್ ಅವರು ಚಿತ್ರಕಥೆ ಬರೆದು ನಿರ್ಮಾಣ ಮಾಡಿರುವ ಈ ಚಿತ್ರವನ್ನು ವೈಭವ್ ರಾಜಣ್ಣ ಅವರು ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ರಾಜ್ ಕಿಶೋರ್ ಅವರ ಸಂಗೀತ ಸಂಯೋಜನೆಯಿದೆ. ಈ ಚಿತ್ರದಲ್ಲಿ ನಾಟಕದಲ್ಲಿ ನಟಿಸಿದಂತೆ ಬಹುತೇಕ ಅದೇ ಕಲಾವಿದರು ನಟಿಸಿದ್ದು ನಿಮ್ಮನ್ನೆಲ್ಲ ನಕ್ಕು ನಗಿಸಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com