ಫೆಬ್ರವರಿ 26 ರಂದು ತೆರೆಗೆ ಬರಲಿದೆ ‘ಕುಂದಾಪುರ’

Published on

765 Views

ಜಿ.ಸಿ ಮೂವೀಸ್ ಕುಂದಾಪುರ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಚಿತ್ರ ‘ದಿ ಸ್ಟೈಂಜ್ ಕೇಸ್ ಆಫ್ ಕುಂದಾಪುರ’ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಚಿತ್ರತಂಡ. ಟ್ರೇಲರ್ ಮೂಲಕ ಸದ್ದು ಮಾಡಿರುವ ಈ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ವನ್ನು ಮೂಡಿಸಿದೆ. ಕುಂದಾಪುರ ಭಾಗದ ಪ್ರತಿಭೆಗಳು ಚಿತ್ರವನ್ನು ನಿರ್ಮಿಸಿರುವುದರಿಂದ ಆ ಪರಿಸರಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಬಳಸಿಕೊಳ್ಳಲಾಗಿದೆಯಂತೆ. ಹಾಗೂ ಅಲ್ಲಿನ ಭಾಷೆ, ಸಂಸ್ಕ್ರತಿ, ಸಾಂಸ್ಕ್ರತಿಕ ಸೊಗಡನ್ನು ತೋರಿಸುವ ಒಂದು ಸಣ್ಣ ಪ್ರಯತ್ನವಾಗಿದ್ದು, ಸ್ಥಳೀಯ ಪ್ರತಿಭೆಗಳಿಗೆ ಈ ಸಿನಿಮಾದಲ್ಲಿ ಅವಕಾಶ ಕೊಡಲಾಗಿದೆ. ಅಲ್ಲಿನ ಸುಂದರ ತಾಣಗಳನ್ನು ಚಿತ್ರಿಕರಿಸಿದ್ದು, ಸಿನಿಮಾದಲ್ಲಿ ಇವುಗಳನ್ನು ತೋರಿಸಲಾಗಿದೆ.

ದಿ ಸ್ಟೈಂಜ್ ಕೇಸ್ ಆಫ್‌ ಕುಂದಾಪುರ’ ಸಿನಿಮಾವು ಫೆಬ್ರುವರಿ 26 ರಂದು ತೆರೆಗೆ ಬರಲಿದ್ದು, ಕೋಟೇಶ್ವರ, ಉಡುಪಿ, ಮಂಗಳೂರು, ಶಿವಮೊಗ್ಗದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಚಿತ್ರದ ಟ್ರೇಲರ್ ‌ನ್ನು ಜಿ.ಸಿ ಮೂವೀಸ್ ಕುಂದಾಪುರ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ. ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ ಓಂ ಗುರು ಬಸ್ರೂರು ಮಾಡಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಚಂದ್ರಶೇಖರ್ ಬಸ್ರೂರು, ಓಂ ಗುರು ಬಸ್ರೂರು ಹೊತ್ತಿದ್ದಾರೆ. ಚಿತ್ರಕ್ಕೆ ಉತ್ತಮ್ ಸಾರಂಗ್ ಸಂಗೀತ‌ ನೀಡಿದ್ದು, ಪ್ರವೀಣ್ ನಾಡ ಛಾಯಾಗ್ರಹಣ ಮಾಡಿದ್ದಾರೆ. ಸುಪ್ರೀತ್ BK ರವರ ಸಂಕಲನ‌ ಚಿತ್ರಕ್ಕಿದ್ದು, ಫೈಟ್ ಮಾಸ್ಟರ್ ನಟರಾಜ್ VN ಸಾಹಸ ದೃಶ್ಯಗಳನ್ನು ಮಾಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಬಾಲ ರಜವಾಡಿ, ಓಂ‌ ಗುರು ಬಸ್ರೂರು, ಚಂದ್ರಶೇಖರ್ ಬಸ್ರೂರು, ಕರುಣಕರ, ಕವನ ಜಗ್ವಾರ್, ಹರ್ಷ ದಾಂಡೇಲಿ, ರಘು ಪಾಂಡೇಶ್ವರ್, ನಾಗರಾಜ್ ಗೋಳಿ, ಸತ್ಯನಾರಾಯಣ ಬಸ್ರೂರು, ನಾಗರಾಜ್ ತೆಕ್ಕಟ್ಟೆ, ಸ್ವರಾಜ್ಯ ಲಕ್ಷ್ಮೀ, ಪ್ರಭಾಕರ್ ಕುಂದರ್, ಉನ್ನತಿ ಉಡುಪಿ ಮುಂತಾದವರ ತಾರಾಬಳಗವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com