ಕಿಚ್ಚನ ಅಭಿಮಾನಿಗಳಿಂದ ಕೆ ಎಸ್ ಪಿ ಎಲ್ ಕ್ರಿಕೆಟ್ ಹಬ್ಬ
2020 ಡಿಸೆಂಬರ್ 25/26/27 ಕ್ರಿಕೆಟ್ ಹಬ್ಬ. ಅಭಿಮಾನಿಗಳಿಂದ ಅಭಿಮಾನಿಗಳಿಗೋಸ್ಕರ
ಕೆ. ಎಸ್. ಪಿ. ಎಲ್. ಸೀಸನ್ 2
ಪ್ರಾರಂಭ ಆಗ್ತಿದೆ.. ಮೂರುದಿನ ನಡೆಯೋ ಈ ಟೆನ್ನಿಸ್ ಬಾಲ್ ಟೂರ್ನಮೆಂಟ್ ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜನೆ ಮಾಡಲಾಗಿದೆ.
IPL ಗೆ ಸರಿಸಮನಾಗಿ ಅದ್ದೂರಿಯಾಗಿ ನಡೆಸಲಾಗುತ್ತದೆ.
ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗೆ ಒಂದು ಟೀಮ್ ಇದರಲ್ಲಿ ಭಾಗವಹಿಸುತ್ತದೆ. ಇನ್ನೊಂದು ವಿಷಯ ಇದು ನಮ್ಮ ಬಾದ್ ಷ ಕಿಚ್ಚ ಸುದೀಪ ರವರ ಅಭಿಮಾನಿಗಳು ಮಾತ್ರ ಭಾಗವಹಿಸುತ್ತಾರೆ. ಆಕರ್ಷಕ ಟ್ರೋಫಿಗಳು, ನಗದು ಬಹುಮಾನ ಮತ್ತು ಉತ್ತೇಜನ ಬಹುಮಾನಗಳು ಕೂಡ ಇಲ್ಲಿರುತ್ತದೆ.
ಇನ್ನೂ ವಿಶೇಷ ಏನೆಂದರೆ ಈ ಸಲದ ಟೂರ್ನಮೆಂಟ್ ಉದ್ಘಾಟನೆ ಮಹಿಳಾ ಅಭಿಮಾನಿಗಳ ಎರಡು ತಂಡದೊಂದಿಗೆ ಪ್ರಾರಂಭ ಪಡೆದರೆ ಅಂತ್ಯದಲ್ಲಿ ಆಯೋಜಕರು ಮತ್ತು ಸಿನಿಮಾ ಪತ್ರಕರ್ತರ ನಡುವೆ ಕೂಡ ಒಂದು ಜಿದ್ದಾ ಜಿದ್ದಿನ ಪಂದ್ಯ ನಡೆಯಲಿದೆ.
ಕನ್ನಡ ಚಿತ್ರರಂಗದ ಕಲಾವಿದರು ಕರ್ನಾಟಕದ ಪ್ರಮುಖ ಕ್ರಿಕೆಟ್ ಆಟಗಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಟೂರ್ನಮೆಂಟ್ ಕಿಚ್ಚ ಸುದೀಪ ಸರ್ ಅವರ ಅಭಿಮಾನಿ ಅಪಘಾತದಲ್ಲಿ ಮೃತಪಟ್ಟ ನಂದೀಶ್ ರವರ ಎರಡನೇ ವರ್ಷದ ಸ್ಮರಣಾರ್ಥ ನಡೆಯಲಿದೆ. ಇದರ ಎಲ್ಲಾ ಉಸ್ತುವಾರಿ ಕೆ.ಎಸ್.ಸಿ.ಎ ಅಂದರೆ ಬಾದ್ ಷ್ ಕಿಚ್ಚ ಸುದೀಪ ರವರ ಸಂಸ್ಥೆ “ಕಿಚ್ಚ ಸುದೀಪ ಕ್ರಿಕೆಟ್ ಅಸೋಸಿಯೇಷನ್” ವಹಿಸಿಕೊಂಡು ಈ ಟೂರ್ನಮೆಂಟ್ ಆಕರ್ಷಕವಾಗಿ, ಶಿಸ್ತುಬದ್ದವಾಗಿ ಮುಖ್ಯವಾಗಿ ಸಾರ್ಥಕ ರೀತಿ ನಡೆಸಿ ಕೊಡಲು ನೆಲಮಂಗಲದ ಆದಿತ್ಯ ಗ್ಲೋಬಲ್ ಕ್ರಿಕೆಟ್ ಗ್ರೌಂಡ್ ನಲ್ಲಿ ತಯಾರಿ ಮಾಡಿಕೊಂಡಿದೆ.