ಮೆಚ್ಚುಗೆ ಪಡೆದ ಕೃತಿಕಾ ರವೀಂದ್ರ ಅಭಿನಯದ “ಒಲವೇ” ಆಲ್ಬಮ್ ಸಾಂಗ್
ಕಿರುತೆರೆಯ ಮೂಲಕ ಖ್ಯಾತಿ ಪಡೆದಿರುವ ಕೃತಿಕಾ ರವೀಂದ್ರ ನಂತರ ಸಿನಿಮಾದಲ್ಲೂ ನಾಯಕನಟಿಯಾಗಿ ಗುರುತಿಸಿಕೊಂಡಿದ್ದರು. ಈಗಲೂ ಒಂದಷ್ಟು ಸಿನಿಮಾದಲ್ಲಿ ಬಿಜಿಯಾಗಿರುವ ಕೃತಿಕಾ ರವೀಂದ್ರ 2021 ರ ಹೊಸ ವರ್ಷಕ್ಕೆ ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ವಿನೂತನ ರೊಮ್ಯಾಂಟಿಕ್-ಲವ್ ಮ್ಯೂಸಿಕ್ ಆಲ್ಬಮ್ ಸಾಂಗ್ ನ್ನು ಹೊರತಂದಿದ್ದಾರೆ.
‘ಒಲವೇ’ ಎಂಬ ಶೀರ್ಷಿಕೆ ಯಿರುವ ಈ ಹಾಡಿನಲ್ಲಿ ಕೃತಿಕಾ ರವೀಂದ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವರುಣ್ ಹೆಗಡೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಯುವ ನಿರ್ದೇಶಕಿ ಎಂ.ಎಸ್.ಶಿವಾನಿ ನಿರ್ದೇಶನ ಮಾಡಿದ್ದಾರೆ. ಸಾಹಿತ್ಯ, ಸಂಗೀತ ಗಾಯಕ ಡಾ. ಸುಚೇತನ್ ನೀಡಿದ್ದಾರೆ. ಆನಂದ್ ಆಡಿಯೋ ಕಂಪೆನಿ ಈ ಗೀತೆಯನ್ನು ಹೊರತಂದಿದ್ದು, ಉತ್ತಮ ಮೆಚ್ಚುಗೆಯನ್ನು ಪಡೆದಿದೆ. ಕಾರ್ತಿಕ್ ಹಾಗೂ ನವೀನ್ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನಕಾರ ಶ್ರೀಕಾಂತ್ ಈ ಹಾಡಿನ ವಿಡಿಯೋ ಎಡಿಟ್ ಮಾಡಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಈ ಹಾಡಿನ ಚಿತ್ರೀಕರಣ ನಡೆದಿದೆ.