ಅಂದರ ಜಗತ್ತಿನಲ್ಲಿ ಕೃಷ್ಣ ತುಳಸಿ ಪ್ರೇಮ ಸಂಚಾರ!!

Published on

419 Views

ಅನ್ನಪೂರ್ಣೇಶ್ವರಿ ಕ್ರಿಯೇಷನ್ ಅಡಿಯಲ್ಲಿ ಎಂ ನಾರಾಯಣಸ್ವಾಮಿ ಅವರ ನಿರ್ಮಾಣದ `ಕೃಷ್ಣ ತುಳಸಿ’ ಒಂದು ವಿಶಿಷ್ಟ ಕಥಾನಕ ಹೊಂದಿರುವ ಚಿತ್ರ.

ಸುಕೇಶ್ ನಾಯಕ್ ಅವರ ನಿರ್ದೇಶನದಲ್ಲಿ ಕಥಾ ನಾಯಕ ಸಂಚಾರಿ ವಿಜಯ್ ಅಂಧ ವ್ಯಕ್ತಿ. ಇವರಿಗೆ ಸಾಥ್ ಆಗಿರುವವರೆ ಕಥಾ ನಾಯಕಿ ಮೇಘಶ್ರೀ. ಅಂಧ ವ್ಯಕ್ತಿಯ ಬಾಳಿನಲ್ಲಿ ಎನಲ್ಲ ಸಂಭವಿಸುತ್ತದೆ ಎಂಬುದು ಕಥಾ ತಿರುಳು.
ಕಿರಣ್ ರವೀಂದ್ರನಾಥ್ ಅವರ ಇಂಪಾದ ಸಂಗೀತದಲ್ಲಿ ಈಗಾಗಲೇ ಹಾಡುಗಳು ಪ್ರಸಿದ್ದಿ ಆಗಿದೆ. ಯೋಗರಾಜ ಭಟ್, ಜಯಂತ್ ಕಾಯ್ಕಿಣಿ, ಹೃದಯ ಶಿವ, ಧನಂಜಯ್, ವರುಣ ದೇವ ಕೊಲಪು ಗೀತ ಸಾಹಿತ್ಯ ರಚಿಸಿದ್ದಾರೆ. ವಾಸು ದೀಕ್ಷಿತ್ ಅವರು ಒಂದು ಹಾಡಿನಲ್ಲಿ ಅವರ ತಂಡದೊಂದಿಗೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನವಿನ್ ಅಕ್ಷಿ ಛಾಯಾಗ್ರಾಹಕರು. ದೀಪು ಎಸ್ ಕುಮಾರ್ ಅವರು ಸಂಕಲ ಜೊತೆ ಕೆಲವು ಸೂಚನೆಗಳನ್ನು ಸಹ ಒದಗಿಸಿದ್ದಾರೆ. ತಬಲಾ ನಾಣಿ, ಕುರಿ ಪ್ರತಾಪ್ ಹಾಗೂ ಇತರರು ಪೆÇೀಷಕ ಪಾತ್ರಗಳಲ್ಲಿ ಇದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com