ದ್ವಿಭಾಷಾ ಚಿತ್ರದಲ್ಲಿ ಚಿನ್ನದ ಗೊಂಬೆ ಕೀರ್ತಿ ಕೃಷ್ಣ ನಾಯಕ

Published on

375 Views

ಚಿನ್ನದ ಗೊಂಬೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ
ಗುರುತಿಸಿಕೊಂಡ ಕೀರ್ತಿ ಕೃಷ್ಣ ಅವರು ಸದ್ಯ “ನಾರಯಣ ನಾರಯಣ”
ಅನ್ನೊ ಕಾಮಿಡಿ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಈ ಚಿತ್ರ ತಯಾರಾಗಲಿದೆ. ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ ಈ ಚಿತ್ರದ ಮಹೂರ್ತ ಇಂದು ಕನಕಪುರದ ಕೆಂಕೇರಮ್ಮ ದೇವಸ್ಥಾನದಲ್ಲಿ ನೆರವೇರಿದೆ.

ವಿಶೇಷವೆಂದರೆ ತೆಲುಗಿನ ಖ್ಯಾತ ನಟರುಗಳಾದ ದೇವ್ ಗಿಲ್
ಪ್ರದೀಪ್ ರಾಹುತ್,ಸಯ್ಯಾಜಿ ಶಿಂಧೆ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ.‌

ಪುಷ್ಪ ಫಿಲಂಸ್ ಬ್ಯಾನರ್ ಅಡಿಯಲ್ಲಿ ನರಸಿಂಹ ಎಂಬುವವರು
ನಿರ್ಮಿಸಲಿರುವ ಈ ಚಿತ್ರವನ್ನು ತೆಲುಗು ಮೂಲದ ಲಕ್ಷ್ಮಣ್ ಅವರು
ನಿರ್ದೇಶನ ಮಾಡಲಿದ್ದಾರೆ. ಕೀರ್ತಿ ಕೃಷ್ಣ ಅವರಿಗೆ ಜೋಡಿಯಾಗಿ
ಮಮತಾ ರಾಹುತ್ ಅವರು ನಟಿಸಲಿದ್ದಾರೆ. ಚಿತ್ರಕ್ಕೆ ರಾಜ್ ಕಿರಣ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com