ಕೆಂಪೇಗೌಡ”ನ ಅವತಾರವೆತ್ತಿ ಬರುತ್ತಿದ್ದಾರೆ ಕೋಮಲ್

Published on

318 Views

“ಕೆಂಪೇಗೌಡ”ನ ಅವತಾರವೆತ್ತಿ ಬರುತ್ತಿದ್ದಾರೆ ಕೋಮಲ್

ಕನ್ನಡ ಚಿತ್ರರಂಗದಲ್ಲಿ ನಟನಾಗಿ ಪಾದಾರ್ಪಣೆ ಮಾಡಿ ನಂತರ ಹಾಸ್ಯ
ನಟನಾಗಿ ಪೋಷಕನಟನಾಗಿ ಮತ್ತೆ ನಟನಾಗಿ ಪ್ರೇಕ್ಷಕರನ್ನು ರಂಜಿಸಿದವರು
ನಟ ಕೋಮಲ್ ಕುಮಾರ್ ಅವರು. ನಮೋ ಭೂತಾತ್ಮ ಚಿತ್ರದ ನಂತರ
ಕೋಮಲ್ ಅವರು ತಮ್ಮ ದೇಹವನ್ನು ದಂಡಿಸಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಕೆಂಪೇಗೌಡ ನಾಗಿ ಬರುತ್ತಿದ್ದಾರೆ.

ಶಂಕರೇಗೌಡ ಅವರು ನಿರ್ದೇಶನ ಮಾಡಿರುವ ಕೆಂಪೇಗೌಡ-2 ಚಿತ್ರದಲ್ಲಿ ಕೋಮಲ್ ಅವರು ಖಡಕ್ ಪೋಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪೇಗೌಡ ಚಿತ್ರದಲ್ಲಿ ಸುದೀಪ್ ಅವರು ನಟಿಸಿ ಘರ್ಜಿಸಿದ್ದರು,ಈಗ ಕೆಂಪೇಗೌಡ-2 ಚಿತ್ರದಲ್ಲಿ ಕೋಮಲ್ ಅವರು ಕೆಂಪೇಗೌಡನಾಗಿ ಘರ್ಜೀಸಲು ಬರುತ್ತಿದ್ದಾರೆ. ಈಗಾಗಲೇ ಟೀಸರ್ ಮೂಲಕ ಕುತೂಹಲ ಹುಟ್ಟಿಸಿರುವ ಈ ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಕ್ರಿಕೆಟ್ ಆಟಗಾರನಾದ ಶ್ರೀಶಾಂತ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈಗ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಹಾಡುಗಳು ಮತ್ತು ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿವೆ. ಪಂಚಮುಖಿ ಹನುಮಾನ್ ಸಿನಿಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎ ವಿನೋದ್ ಅವರು ನಿರ್ಮಾಣ ಮಾಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com