‘ನನ್ನನ್ನು ಬದುಕಿಸಿದ್ದೆ ಆ ಕೊಲ್ಲುರು ದೇವಿ’ ಎಂದು ಮನಸ್ಸು ಬಿಚ್ಚಿ ಮಾತನಾಡಿದ ರಾಘಣ್ಣ..!!!
ಉಡುಪಿ : “ತ್ರಯಂಬಕಂ” ಕನ್ನಡ ಚಿತ್ರವೊಂದರ ಚಿತ್ರೀಕರಣವು ಕಾಪು ಬೀಚಿನಲ್ಲಿ ನಡೆಯುತಿತ್ತು. ಶ್ರೇಷ್ಠ ನಟರಾದ ರಾಘವೇಂದ್ರ ರಾಜ್ ಕುಮಾರ್, ನಾಯಕ ನಟ ಆರ್.ಜೆ.ರೋಹಿತ್ ಮತ್ತು ನಟಿ ಅನುಪಮ ಗೌಡ ನಟನೆಯ ಫ್ಯೂಚರ್ ಎಂಟರ್ಟೈನ್ಮೆಂಟ್ ಫಿಲಂಸ್ ನಿರ್ಮಾಣದ, ದಯಾಳ್ ಪದ್ಮನಾಭ ನಿರ್ದೇಶನದ ‘ತ್ರಯಂಬಕಂ’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಿತು.
“ತ್ರಯಂಬಕಂ” ಚಿತ್ರದ ವಿಶೇಷ ಏನೆಂದರೆ ? ರಾಘಣ್ಣ ಹಲವು ವರ್ಷಗಳ ನಂತರ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಕೊನೆಯ ದೃಶ್ಯ ಕಾಪು ಬೀಚಿನಲ್ಲಿ ನಡೆಯಿತು. ಆ ಸಂದರ್ಭದಲ್ಲಿ ರಾಘಣ್ಣ ಮನಸ್ಸು ಬಿಚ್ಚಿ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ..
ರಾಘವೇಂದ್ರ ರಾಜ್ ಕುಮಾರ್ ಮಾತುಗಳು : ” ನಾನು ಹನ್ನೆರಡು ವರ್ಷಗಳ ನಂತರ ಬಣ್ಣ ಹಚ್ಚಿದ್ದಿನಿ, ನಾನು ಬದುಕಿದ್ದೆ ಹೆಚ್ಚು, ಸಾವಿನ ನಡುವೆ ಹೋರಾಡಿ ಬಂದವನು , ಆ ಕೊಲ್ಲೂರು ಮೂಕಾಂಬಿಕಾ ದೇವಿ ನನ್ನನ್ನು ಬದುಕಿಸಿದು. ಆ ದೇವಿಯ ದಯೆಯಿಂದ ಪುನಃ ಬಣ್ಣ ಹಚ್ಚಿದ್ದೇನೆ. ನಾನು ಗುಣಮುಖವಾದ ಬಳಿಕ ಇದು ಎರಡನೇ ಸಲ ಚಂಡಿಕಾ ಹೋಮಾ ಮಾಡಿಸುವುದು, ಆದರಿಂದ ಎರಡು ಚಿತ್ರಗಳಿಗೆ ಬಣ್ಣ ಹಚ್ಚಿದೆ. ಪ್ರತಿ ವರ್ಷ ದೇವಿಗೆ ಚಂಡಿಕಾ ಹೋಮಾ ಮಾಡಿಸುತ್ತೇವೆ. ನನ್ನ ಅಪ್ಪಾಜಿ ಜೊತೆಗೆ ಯಾವಾಗಲೂ ಕೊಲ್ಲೂರು ದೇವಾಲಯಕ್ಕೆ ಬರುತ್ತ ಇದ್ದೇವು, ಅಪ್ಪಾಜಿ ಕೊಲ್ಲೂರು ದೇವರ ಹಾಡುಗಳನ್ನು ಹಾಡಿದ್ದಾರೆ. ವೀರಪ್ಪನ್ ಅಪ್ಪಾಜಿಯನ್ನು ಅಪಹರಣ ಮಾಡಿದಾಗ ಕೂಡ ಈ ದೇವರಿಗೆ ಹರಕೆ ಹೇಳಿದ್ದೇವೆ, ನಾನು ಅಪ್ಪಾಜಿ ಜೊತೆಗೆ ಉಡುಪಿ ಕೃಷ್ಣ ಮಠಕ್ಕೆ ಕೊಡ ಬರುತ್ತ ಇದ್ದೆ. ದೇವರು ನಡೆಸಿದರೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿತ್ತೇನೆ” ಎಂದು ಹೇಳಿದರು.
ಐಟಿ ದಾಳಿ ಬಗ್ಗೆ ಕೇಳಿದಾಗ..ಐಟಿ ದಾಳಿಯಿಂದ ನಟರಿಗೆ ತೊಂದರೆಯಾಗಿಲ್ಲ, ಬೇಡಿಕೆಯ ನಟರೆಂದಾಗ ಇದೆಲ್ಲಾ ಸಹಜ, ನಮ್ಮ ಬಳಿ ದಾಖಲೆಗಳು ಇರಬೇಕು. ದಾಖಲೆಗಳನ್ನು ಪರಿಶೀಲಿಸುವುದು ಐಟಿಯವರ ಕರ್ತವ್ಯ, ಅದಕ್ಕೆ ನಟರು ಸಹಕರಿಸಬೇಕು. ಇದೆಲ್ಲಾ ಎದುರಿಸಲೇ ಬೇಕು. ಇದರ ಹಿಂದೆ ಯಾರ ಕೈವಾಡ ಇದೆ ಎಂದು ಗೊತ್ತಿಲ್ಲ, ಆದರೆ ಇದರಿಂದ ಯಾರಿಗೂ ತೊಂದರೆ ಆಗಿಲ್ಲ ” ಎಂದು ಹೇಳಿದರು.
ಈ ಚಿತ್ರದ ಬಗ್ಗೆ ಕೇಳಿದಾಗ..”ದಯಾಳ್ ಪದ್ಮನಾಭ್ ನಿರ್ದೇಶನದ ಉತ್ತಮ ಕಥೆಯ ಚಿತ್ರ. ಈ ಚಿತ್ರದಲ್ಲಿ ನಾಯಕರು ಅಂತ ಯಾರು ಇಲ್ಲ. ನಾನು ರೋಹಿತ್ ಮತ್ತು ಅನುಪಮ ಮೂರು ಜನ ಕೂಡ ಹೀರೋ ಗಳೇ, ಚಿತ್ರದ ಕಥೆ ಥ್ರಿಲ್ಲರ್ ಆಗಿದೆ. ಚಿತ್ರ ಉತ್ತಮವಾಗಿ ಮೂಡಿ ಬರುತ್ತದೆ, ಇಲ್ಲಿ ಎಲ್ಲರ ಪಾತ್ರಗಳು ಮೆಚ್ಚುವಂತದು” ಎಂದು ಹೇಳಿದರು.