ಗ್ರ್ಯಾಂಡ್‌ ಮಾಸ್ಟರ್ ವಿಶ್ವನಾಥನ್ ಆನಂದ್ ಜೊತೆ ಚೆಸ್ ಆಡಲಿದ್ದಾರೆ ಕಿಚ್ಚ ಸುದೀಪ್

Published on

424 Views

ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್‌.ಕಾಮ್‌ ‘ಚೆಕ್‌ಮೇಟ್‌ ಕೋವಿಡ್‌’ ಸೆಲೆಬ್ರಿಟಿ ಆವೃತ್ತಿಯನ್ನು ನಡೆಸುತ್ತಿದ್ದು, ಭಾನುವಾರ ಸಂಜೆ 5ರಿಂದ ರಾತ್ರಿ 8 ಗಂಟೆಯವರೆಗೆ ಐದು ಬಾರಿ ವಿಶ್ವಚಾಂಪಿಯನ್‌ ಆಗಿರುವ ವಿಶ್ವನಾಥನ್‌ ಆನಂದ್‌ ಅವರು ಎರಡು ಬ್ಯಾಚ್‌ಗಳಲ್ಲಿ ಅರ್ಧ ಗಂಟೆಗಳಂತೆ ಹಲವು ಗಣ್ಯರೊಂದಿಗೆ ಏಕಕಾಲದಲ್ಲಿ ಚೆಸ್‌ ಆಡಲಿದ್ದಾರೆ. ಆ ಗಣ್ಯರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ಒಬ್ಬರು.
kichhasudeep
ಕನ್ನಡದ ಕಿಚ್ಚ ಸುದೀಪ್ ಅಲ್ಲದೇ ಅಮೀರ್‌ ಖಾನ್‌, ರಿತೇಷ್‌ ದೇಶ್‌ಮುಖ್‌ ಕ್ರಿಕೆಟ್‌ ಆಟಗಾರ ಯಜುವೇಂದ್ರ ಚಾಹಲ್‌, ಗಾಯಕಿ ಅನನ್ಯಾ ಬಿರ್ಲಾ, ಗಾಯಕ ಅರ್ಜಿತ್‌ ಸಿಂಗ್‌, ನಿರ್ಮಾಪಕ ಸಾಜಿದ್‌ ಕೂಡ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ ಚೆಸ್ ಆಡಲಿದ್ದಾರೆ.
ನಾನ್ ಯೂನಿಯನ್ ಸಹ ಮತ್ತು ಸಹಾಯಕ ನಿರ್ದೇಶಕರಿಗೆ ಕಿಟ್ ವಿತರಿಸಿದ ಲಿಂಗರಾಜ್ ಇತಿಹಾಸ
Haseen Dillruba Official Trailer starring Taapsee Pannu
ಈ ಸ್ಪರ್ಧೆಯ ನಂತರ ಸ್ಪರ್ಧಿಗಳೊಂದಿಗೆ ಆನಂದ್‌ ಸಂವಾದವನ್ನೂ ನಡೆಸಲಿದ್ದಾರೆ. ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಇದನ್ನು ಆಯೋಜಿಸಲಾಗುತ್ತಿದೆ. ಚೆಸ್‌ಕಾಮ್‌ ಇಂಡಿಯಾ ಯೂಟ್ಯೂಬ್‌ ಚಾನೆಲ್‌ನಲ್ಲಿ ಇದರ ನೇರಪ್ರಸಾರವಿರಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com