ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಕಿಚ್ಚ ಸುದೀಪ್

Published on

366 Views

ಹಿರಿಯ ಪತ್ರಕರ್ತ ರವಿ ಬೆಳಗೆರೆ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದು, ಅವರ ನಿಧನಕ್ಕೆ ಲಕ್ಷಾಂತರ ಜನ ಸಂತಾಪ ಸೂಚಿಸಿದ್ದಾರೆ. ಬಿಗ್ಬಾಸ್ ಸ್ಪರ್ಧಿಯಾಗಿದ್ದ ರವಿಬೆಳಗೆರೆ ಬಗ್ಗೆ ಕಿಚ್ಚ ಸುದೀಪ್ ಬಿಗ್ ಬಾಸ್ ನಲ್ಲಿ ಭಾಗವಹಿಸಿದ ದಿನಗಳನ್ನು ನೆನೆದು, ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.

ರವಿ‌ ಬೆಳಗೆರೆಯವರನ್ನು ಕೊನೆಯದಾಗಿ ನೋಡಿರೋದು ಬಿಗ್ ಬಾಸ್ ವೇದಿಕೆ ಮೇಲೆ. ಆ ಕ್ಷಣ ನಮಗೆ ಮರೆಯಲಾಗದು. ನನ್ನ ಹಾಗೆಯೇ ಅವರ ಜೊತೆಯಲ್ಲಿದ್ದ ಎಲ್ಲ ಸ್ಪರ್ಧಿಗಳು ಅವರ ನೆನಪನ್ನು ಖಂಡಿತ ಮೆಲುಕು ಹಾಕುತ್ತಾರೆ. ನಿಮ್ಮನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಮಿಸ್ ಯೂ ಸರ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ನಿಮ್ಮ ಕುಟುಂಬಕ್ಕೂ ದೇವರು ಶಕ್ತಿ‌ ನೀಡಲಿ ಎಂದು ಸುದೀಪ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಾದ ಶೈನ್ ಶೆಟ್ಟಿ ದೀಪಿಕಾ‌ದಾಸ್ ಸೇರಿದಂತೆ ಹಲವರು ರವಿಬೆಳೆಗೆರೆಯವರ ಅಂತಿಮ ದರ್ಶನ ಪಡೆದರು. ಪ್ರಾರ್ಥನಾ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬನಶಂಕರಿ ಚಿತಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com