ಕಿಚ್ಚ ಸುದೀಪ್ ಅಳಿಯ ಚಿತ್ರರಂಗಕ್ಕೆ ಪಾದಾರ್ಪಣೆ…!!!

Published on

726 Views

ಕಿಚ್ಚ ಸುದೀಪ್ ಅವರ ಅಳಿಯ (ಅಕ್ಕನ ಮಗ) ಸಂಚಿತ್, ಕೆಲವು ವರ್ಷಗಳಿಂದ ಚಲನಚಿತ್ರದ ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ಮಾಡಿ ಅನುಭವ ಹೊಂದಿರುವ ಸಂಚಿತ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ಸಿನಿಮಾಟೋಗ್ರಾಫಿ ಮತ್ತು ನಟನೆಯ ಮೇಲೆ ತರಬೇತಿಯನ್ನು ಪಡೆದು ಹೀರೋ ಆಗೋ ತಯಾರಿಯಲ್ಲಿದ್ದಾರೆ.

ಅಲ್ಲದೆ 2019 ರ ಜನವರಿಯಿಂದ ಮಾರ್ಚ್ ವರೆಗೆ ಮುಂಬೈಯಲ್ಲಿ ಫೈಟ್ಸ್ ಮತ್ತು ದೇಹದಾರ್ಢ್ಯ ಮತ್ತು ಫಿಟ್ನೆಸ್ ಕುರಿತು ತರಬೇತಿಯನ್ನು ಪಡೆಯಲಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಈಗಾಲೇ ತಯಾರಾಗಿದ್ದು, ಚಿತ್ರದಲ್ಲಿ ಪಿಟ್ನೆಸ್ ಅಗತ್ಯವಿರುದರಿಂದ ಸುದೀಪ್ ಅವರ ‘ಪೈಲ್ವಾನ್’ ಚಿತ್ರಕ್ಕೆ ಸ್ಟಂಟ್ ನಿರ್ದೇಶನ ಮಾಡಿದ್ದ ಪೀಟರ್ ಹೇನ್ಸ್ ಬಳಿ ಫಿಟ್ನೆಸ್ ಕುರಿತು ತರಬೇತಿ ಪಡೆಯಲಿದ್ದಾರೆ. ಎಲ್ಲಾ ಸಿದ್ಧತೆಗಳು ಜೂನ್ ಹೊತ್ತಿಗೆ ಮುಗಿಯಲಿದ್ದು ಬಳಿಕ ಚಿತ್ರೀಕರಣ ಪ್ರಾರಂಭವಾಗಲಿದೆ. 2019 ರ ಕೊನೆಯಲ್ಲಿ ಸಂಚಿತ್ ಬೆಳ್ಳಿಪರದೆ ಮೇಲೆ ಮಿಂಚಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com